ಅಬುಧಾಬಿ: ಎಲ್ಲಾ ಸರ್ಕಾರಿ ಘಟಕಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಇನ್ಮುಂದೆ ನಾಲ್ಕೂವರೆ ದಿನಗಳವರೆಗೂ ಕೆಲಸ ಮಾಡುವಂತೆ ಹೊಸ ವೇಳಾಪಟ್ಟಿಯನ್ನು ಜಾರಿಗೆ ತರಲು ಯುನೈಟೆಡ್ ಅರಬ್ ಎಮಿರೇಟ್ಸ್ ನಿರ್ಧರಿಸಿದೆ. ಶುಕ್ರವಾರ ಮಧ್ಯಾಹ್ನದ ಜೊತೆ ಶನಿವಾರ ಮತ್ತು ಭಾನುವಾರ ಹೊಸ ವಾರಾಂತ್ಯವೆಂದು ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಈ ಕುರಿತಂತೆ ಇಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಲಾಗಿದ್ದು, 2022ರ ಜನವರಿ 1ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ಇದು ಕೆಲಸದ ವಾರವನ್ನು ಪಾಶ್ಚಿಮಾತ್ಯ ವೇಳಾಪಟ್ಟಿಗಳಿಗೆ ಅನುಗುಣವಾಗಿ ಮಾಡುತ್ತದೆ. ಕೆಲಸದ ಜೀವನ ಸಮತೋಲನ ಮತ್ತು ಆರ್ಥಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಗುರಿಯನ್ನು ಈ ಬದಲಾವಣೆ ಹೊಂದಿದೆ. ಐದು ದಿನಗಳಿಂದ ಕಡಿಮೆ ವಾರದ ಕೆಲಸ ಮಾಡಲು ಅವಕಾಶ ನೀಡಿದ ವಿಶ್ವದ ಏಕೈಕ ರಾಷ್ಟ್ರ ಯುಎಇ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು
Advertisement
Advertisement
ಆರ್ಥಿಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಜಾಗತಿಕ ಬೆಳವಣಿಗೆಗಳೊಂದಿಗೆ ವೇಗವನ್ನು ಹೆಚ್ಚಿಸುವ ದೃಷ್ಟಿಯಿಂದ ಯುಎಇಯು ಈ ಪರಿವರ್ತನೆಗೊಳಿಸಿದೆ ಎಂದು ಅಬುಧಾಬಿ ಸರ್ಕಾರಿ ಮಾಧ್ಯಮ ಕಚೇರಿ ಪ್ರಕಟಿಸಿದೆ. ಇದನ್ನೂ ಓದಿ: ಯುಎಸ್, ಭಾರತದ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ CEO
Advertisement
ಹೊಸ ವೇಳಾ ಪಟ್ಟಿಯ ಪ್ರಕಾರ ಸೋಮವಾರದಿಂದ ಗುರುವಾರದವರೆಗೆ ಎಂಟು ಗಂಟೆಗಳ ಪೂರ್ಣ ಕಾಲ ನೌಕರರು ಕೆಲಸ ಮಾಡಬೇಕಾಗಿರುತ್ತದೆ. ಆದರೆ ಶುಕ್ರವಾರ ಮಾತ್ರ ನಾಲ್ಕೂವರೆ ಗಂಟೆ ಕೆಲಸ ಮಾಡಬೇಕಾಗಿರುತ್ತದೆ. ಸರ್ಕಾರಿ ನೌಕರರು ಶುಕ್ರವಾರ ಕೂಡ ಕೆಲಸ ಮಾಡಲು ಬಯಸಿದ್ದಲ್ಲಿ ವರ್ಕ್ ಫ್ರಮ್ ಹೋಂ ಮೂಲಕ ಕೆಲಸ ಮಾಡಲು ಅನುಮತಿ ನೀಡಲಾಗಿದೆ.
#UAE announces today that it will transition to a four and a half day working week, with Friday afternoon, Saturday and Sunday forming the new weekend.
All Federal government departments will move to the new weekend from January 1, 2022. pic.twitter.com/tQoa22pai9
— UAEGOV (@UAEmediaoffice) December 7, 2021
ಮುಸ್ಲಿಂ ರಾಷ್ಟ್ರಗಳಲ್ಲಿ, ಶುಕ್ರವಾರವನ್ನು ಸಾಮಾನ್ಯವಾಗಿ ವಾರದ ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಯುಎಇಯಲ್ಲಿ ಶುಕ್ರವಾರದ ಮಧ್ಯಾಹ್ನ 1:15 ಕ್ಕೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅಲ್ಲದೇ ಕೆಲವು ನೆರೆಯ ದೇಶಗಳಲ್ಲಿ ಕೂಡ ಪ್ರಾರ್ಥನೆ ಮುಗಿಯುವವರೆಗೂ ಅಂಗಡಿಗಳನ್ನು ತೆರೆಯುವ ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಈ ಹೊಸ ವ್ಯವಸ್ಥೆ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಮತ್ತು ಶಾಲೆಗಳಿಗೆ ಅನ್ವಯಿಸಲಾಗುತ್ತದೆಯೇ ಎಂಬುದರ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿಲ್ಲ.
ಯುಎಇಯಲ್ಲಿ 2006 ರವರೆಗೆ ಗುರುವಾರ-ಶುಕ್ರವಾರ ವಾರಾಂತ್ಯ ಇತ್ತು. ನಂತರ ಖಾಸಗಿ ವಲಯವನ್ನು ಅನುಸರಿಸಿ ಶುಕ್ರವಾರ ಮತ್ತು ಶನಿವಾರಗಳಿಗೆ ಸ್ಥಳಾಂತರಗೊಂಡಿತು.