ಮೌಂಟ್ ಮೌಂಗನೂಯಿ: ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಭಾರತ ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿದೆ.
ಗೆಲ್ಲಲು 217 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ 2 ವಿಕೆಟ್ ನಷ್ಟಕ್ಕೆ 38.5 ಓವರ್ ಗಳಲ್ಲಿ 220 ರನ್ ಗಳಿಸಿ ಗುರಿಯನ್ನು ಮುಟ್ಟಿತು. ಮನೋಜ್ ಕರ್ಲಾ ಆಕರ್ಷಕ ಅಜೇಯ ಶತಕ 101 ರನ್(102 ಎಸೆತ, 8 ಬೌಂಡರಿ, 3 ಸಿಕ್ಸರ್) ಸಿಡಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
Advertisement
ಆರಂಭಿಕ ಆಟಗಾರ ನಾಯಕ ಪೃಥ್ವಿ ಶಾ ಮತ್ತು ಮನೋಜ್ ಕರ್ಲಾ ಮೊದಲ ವಿಕೆಟ್ ಗೆ 11.4 ಓವರ್ ಗಳಲ್ಲಿ 71 ರನ್ ಗಳ ಜೊತೆಯಾಟವಾಡಿದರು. ಪೃಥ್ವಿ ಶಾ 29 ರನ್(51 ಎಸೆತ, 4 ಬೌಂಡರಿ) ಹೊಡೆದು ಬೌಲ್ಡ್ ಆದರು. ಶುಭಮನ್ ಗಿಲ್ 31 ರನ್(30 ಎಸೆತ, 4 ಬೌಂಡರಿ) ಹೊಡೆದು ಔಟಾದರು. ಹಾರ್ವಿಕ್ ದೇಸಾಯಿ ಮತ್ತು ಮನಜೋತ್ ಕರ್ಲಾ ಮುರಿಯ ಮೂರನೇ ವಿಕೆಟ್ ಗೆ 89 ರನ್ ಪೇರಿಸಿ ಜಯವನ್ನು ತಂದುಕೊಟ್ಟರು. ಹಾರ್ವಿಕ್ ದೇಸಾಯಿ ಅಜೇಯ 47 ರನ್( 61 ಎಸೆತ, 5 ಬೌಂಡರಿ) ಹೊಡೆದರು.
Advertisement
Advertisement
59 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ತ್ರೇಲಿಯಾ ಪರ ಜೊನಾಥನ್ ಮರ್ಲೊ 76 ರನ್(102 ಎಸೆತ, 6 ಬೌಂಡರಿ) ಪರಮ್ ಉಪ್ಪಲ್ 34 ರನ್(58 ಎಸೆತ, 3 ಬೌಂಡರಿ), ಜಾಕ್ 28 ರನ್(29 ಎಸೆತ, 5 ಬೌಂಡರಿ), ನಥನ್ ಮೆಕ್ ಸ್ವೀನಿ 23 ರನ್(29 ಎಸೆತ, 2 ಬೌಂಡರಿ) ಹೊಡೆದರು.
Advertisement
ಭಾರತದ ಪರ ಇಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಾಗರಕೋಟಿ, ಅನುಕೂಲ್ ರಾಯ್ ತಲಾ ಎರಡು ವಿಕೆಟ್ ಪಡೆದರೆ, ಶಿವಂ ಮಾವಿ ತಲಾ ಒಂದು ವಿಕೆಟ್ ಪಡೆದರು.
ನಾಲ್ಕು ಬಾರಿ ಚಾಂಪಿಯನ್
2000 – ಮಹಮ್ಮದ್ ಕೈಫ್ ಸಾರಥ್ಯದಲ್ಲಿ ಭಾರತ ಶ್ರೀಲಂಕಾವನ್ನು 6 ವಿಕೆಟ್ ಗಳಿಂದ ಸೋಲಿಸಿ ಮೊದಲ ಬಾರಿಗೆ ಕಪ್ ಗೆದ್ದಿತ್ತು.
2006 – ರವಿಕಾಂತ್ ಶುಕ್ಲಾ ನೇತೃತ್ವದ ತಂಡ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ 38 ರನ್ ಗಳಿಂದ ಸೋತಿತ್ತು
2008 – ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 12 ರನ್ ಗಳಿಂದ ಗೆಲ್ಲುವ ಮೂಲಕ ಎರಡನೇ ಬಾರಿ ಕಪ್ ಗೆದ್ದಿತ್ತು.
2012 – ಉನ್ಮುಕ್ತ್ ಚಾಂದ್ ನೇತೃತ್ವದಲ್ಲಿ ಆಸ್ತ್ರೇಲಿಯಾ ವಿರುದ್ಧ 6 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.
2016 – ಇಶಾನ್ ಕಿಶನ್ ನಾಯಕರಾಗಿದ್ದ ವೇಳೆ ವಿಂಡೀಸ್ ವಿರುದ್ಧ 5 ವಿಕೆಟ್ ಗಳಿಂದ ಸೋತಿತ್ತು.
2017 – ಪೃಥ್ವಿ ಶಾ ನೇತೃತ್ವದಲ್ಲಿ ಆಸೀಸ್ ವಿರುದ್ಧ 8 ವಿಕೆಟ್ ಗಳ ಜಯ