– ಜೈಸ್ವಾಲ್ ಏಕಾಂಗಿ ಹೋರಾಟಕ್ಕೆ ತಿಲಕ್ ಆಸರೆ
ಪೋಷೆಫ್ಸ್ಟ್ರೋಮ್: ಯಶಸ್ವಿ ಜೈಸ್ವಾಲ್ ಏಕಾಂಗಿ ಹೋರಾಟ, ತಿಲಕ್ ವರ್ಮಾ ಆಸರೆಯಿಂದ ಭಾರತದ ಕಿರಿಯ ತಂಡವು ಬಾಂಗ್ಲಾದೇಶ ಅಂಡರ್ 19 ತಂಡಕ್ಕೆ 178 ರನ್ ಸಾಧಾರಣ ಮೊತ್ತದ ಗುರಿ ನೀಡಿದೆ.
ಅಂಡರ್ 19 ವಿಶ್ವಕಪ್ ಟೂರ್ನಿಯ ಪೋಷೆಫ್ಸ್ಟ್ರೋಮ್ಯಲ್ಲಿ ಭಾಗವಾಗಿ ಭಾನುವಾರ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತವು 47.2 ಓವರಿಗೆ ಎಲ್ಲಾ ವಿಕೆಟ್ ಕಳೆದುಕೊಂಡು 177 ರನ್ ಪೇರಿಸಿದೆ. ತಂಡದ ಪರ ಯಶಸ್ವಿ ಜೈಸ್ವಾಲ್ 88 ರನ್ (121 ಎಸೆತ, 8 ಬೌಂಡಿರಿ, ಒಂದು ಸಿಕ್ಸ್), ತಿಲಕ್ ವರ್ಮಾ 38 ರನ್ (65 ಎಸೆತ, 3 ಬೌಂಡರಿ) ಹಾಗೂ ಧ್ರುವ ಜುರೇಲ್ 22 ರನ್ (38 ಎಸೆತ, 1 ಬೌಂಡರಿ) ಗಳಿಸಿದರು. ಇದನ್ನೂ ಓದಿ: ಪಾಕ್ ವಿರುದ್ಧ ಶತಕ ಸಿಡಿಸಿದ ಪಾನಿಪುರಿ ಮಾರುತ್ತಿದ್ದ 18ರ ಪೋರ ಜೈಸ್ವಾಲ್
Advertisement
The moment Jaiswal reached 50.
The India fans are loving this knock!#U19CWC | #INDvBAN | #FutureStars pic.twitter.com/a0aHGhieAm
— ICC Cricket World Cup (@cricketworldcup) February 9, 2020
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶದ ಅಂಡರ್ 19 ತಂಡವು ಭಾರತದ ಕಿರಿಯರ ತಂಡದ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆರಂಭಿಕ ಬ್ಯಾಟ್ಸ್ಮನ್ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಇನ್ನಿಂಗ್ಸ್ ನ ಮೊದಲೆರಡು ಓವರ್ಗಳಲ್ಲಿ ಯಾವುದೇ ರನ್ ಗಳಿಸಲಿಲ್ಲ. ನಂತರದ ಓವರ್ಗಳಲ್ಲಿ ಈ ಜೋಡಿಯು ನಿಧಾಗತಿಯ ಜೊತೆಯಾಟವಾಡಿತು. ಇದರಿಂದಾಗಿ ಇನ್ನಿಂಗ್ಸ್ ನ ಆರನೇ ಓವರ್ ಮುಕ್ತಾಯಕ್ಕೆ ಭಾರತದ ಕಿರಿಯರ ತಂಡ 8 ರನ್ ಗಳಿಸಿತ್ತು. ನಂತರ ಓವರಿನಲ್ಲಿ 2 ರನ್ (17 ಎಸೆತ) ಗಳಿಸಿದ್ದ ದಿವ್ಯಾಂಶ್ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು.
Advertisement
ಯಶಸ್ವಿ ಜೈಸ್ವಾಲ್ಗೆ ಸಾಥ್ ನೀಡಿದ ತಿಲಕ್ ವರ್ಮಾ ಉತ್ತಮ ಇನ್ನಿಂಗ್ಸ್ ಕಟ್ಟಲು ಯತ್ನಿಸಿದರು. ಈ ಜೋಡಿಯು ಎರಡನೇ ವಿಕೆಟ್ಗೆ 94 ರನ್ಗಳ ಕೊಡುಗೆ ನೀಡಿತು. ತನ್ಜೀದ್ ಹಸನ್ ಇನ್ನಿಂಗ್ಸ್ 29ನೇ ಓವರಿನ ಕೊನೆಯ ಎಸೆತದಲ್ಲಿ ತಿಲಕ್ ವರ್ಮಾ ಅವರ ವಿಕೆಟ್ ಕಿತ್ತರು. ತಿಲಕ್ ವರ್ಮಾ 38 ರನ್ (65 ಎಸೆತ, 3 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತದ ಕಿರಿಯರ ತಂಡ ಎರಡು ವಿಕೆಟ್ಗೆ 103 ರನ್ ಗಳಿಸಿತು.
Advertisement
Shoriful Islam ends with fine figures of 10-1-31-2 ????
A stunning performance from the Bangladesh paceman today! #U19CWC | #INDvBAN | #FutureStars pic.twitter.com/RYqDsxj9CH
— ICC Cricket World Cup (@cricketworldcup) February 9, 2020
ತಿಲಕ್ ವರ್ಮಾ ವಿಕೆಟ್ ಬಳಿಕ ಮೈದಾನಕ್ಕಿಳಿದ ಭಾರತದ ಅಂಡರ್ 19 ಕ್ರಿಕೆಟ್ ತಂಡದ ನಾಯಕ ಪ್ರಿಯಂ ಗರ್ಗ್ 7 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಈ ಮಧ್ಯೆ ಏಕಾಂಗಿ ಹೋರಾಟ ನಡೆಸಿದ್ದ ಯಶಸ್ವಿ ಜೈಸ್ವಾಲ್ 89ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಈ ಸಂಭ್ರಮದ ಬೆನ್ನಲ್ಲೇ ಜೈಸ್ವಾಲ್ ಇನ್ನಿಂಗ್ಸ್ ನ ಮೊದಲ ಸಿಕ್ಸ್ ಸಿಡಿಸಿದರು.
ಧ್ರುವ ಜುರೇಲ್ ಜೊತೆಗೂಡಿ ಜೈಸ್ವಾಲ್ 42 ರನ್ ಜೊತೆಯಾಟದ ಕೊಡುಗೆ ನೀಡಿದ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. ಜೈಸ್ವಾಲ್ 88 ರನ್ (121 ಎಸೆತ, 8 ಬೌಂಡಿರಿ, ಒಂದು ಸಿಕ್ಸ) ಗಳಿಸಿ ತಂಡಕ್ಕೆ ಆಸರೆಯಾದರು. ಬಳಿಕ ಮೈದಾನಕ್ಕಿಳಿದ ಸಿದ್ಧೇಶ್ ವೀರ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರು. ಬಳಿಕ ಮೈದಾನಕ್ಕಿಳಿದ ಆಟಗಾರರು ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.
Yashasvi Jaiswal's #U19CWC with the bat:
Runs: 4️⃣0️⃣0️⃣
Fifites: 4️⃣
Hundreds: 1️⃣
Average: 1️⃣3️⃣3️⃣.3️⃣3️⃣
???? ???? #INDvBAN | #FutureStars pic.twitter.com/IJPZw6rtbr
— ICC Cricket World Cup (@cricketworldcup) February 9, 2020
ಜೈಸ್ವಾಲ್ ಸಾಧನೆ:
ಅಂಡರ್ 19 ವಿಶ್ವಕಪ್ನಲ್ಲಿ ಭಾರತದ ಕಿರಿಯರ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಜೈಸ್ವಾಲ್ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 2020ರ ಅಂಡರ್ 19 ವಿಶ್ವಕಪ್ನಲ್ಲಿ ಯಶಸ್ವಿ ಜೈಸ್ವಾಲ್ ಒಟ್ಟು 400 ರನ್ ಗಳಿಸಿದ್ದಾರೆ. 2018ರ ಅಂಡರ್ 19 ವಿಶ್ವಕಪ್ನಲ್ಲಿ 372 ರನ್ ಗಳಿಸಿದ್ದ ಶುಭಮನ್ ಗಿಲ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಪಟ್ಟಿಯಲ್ಲಿ ಶಿಖರ್ ಧವನ್ ಇದ್ದಾರೆ. ಅವರು 2004ರ ಅಂಡರ್ 19 ವಿಶ್ವಕಪ್ನಲ್ಲಿ 505 ರನ್ ಗಳಿಸಿದ್ದರು. ಉಳಿದಂತೆ ಸರ್ಫರಾಜ್ ಖಾನ್ 2016ರ ಅಂಡರ್ 19 ವಿಶ್ವಕಪ್ನಲ್ಲಿ 355 ರನ್ ಹಾಗೂ ಚೇತೇಶ್ವರ್ 2006ರಲ್ಲಿ 349 ರನ್ ದಾಖಲಿಸಿದ್ದರು.