ಅಬುದಾಬಿ: ಇಂದಿನ ಸೂಪರ್ ಸಂಡೇ ಭಾರತದ ಕ್ರಿಕೆಟ್ ಜಗತ್ತಿನ (Indian Cricket World) ಕರಾಳ ದಿನವಾಗಿ ಪರಿಣಮಿಸಿದೆ. ಒಂದೇ ದಿನ ಹ್ಯಾಟ್ರಿಕ್ ಸೋಲಿನ ಬಿಸಿ ಭಾರತಕ್ಕೆ ತಟ್ಟಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ, ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿವೆ. ಇತ್ತ U19 ಏಷ್ಯಾಕಪ್ (U19 Asia Cup) ಟೂರ್ನಿಯಲ್ಲಿ ಭಾರತ ಪುರುಷರ ತಂಡ ಫೈನಲ್‌ನಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. U19 ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಇದು ಭಾರತದ ಮೊದಲ ಸೋಲಾಗಿದೆ. ಹಾಗಾಗಿ ಬಾಂಗ್ಲಾದೇಶ (Bangladesh) U19 ಪುರುಷರ ತಂಡ ಫೈನಲ್‌ನಲ್ಲಿ ಗೆದ್ದು 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದನ್ನೂ ಓದಿ: ಆಸೀಸ್ ವಿರುದ್ಧ ಹೀನಾಯ ಸೋಲು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಭಾರತ, ಫೈನಲ್ ಹಾದಿ ಕಠಿಣ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡದ ಫೈನಲ್‌ನಲ್ಲಿ 199 ರನ್‌ಗಳ ಗುರಿ ಪಡೆದ ಭಾರತ 35.2 ಓವರ್‌ಗಳಲ್ಲೇ 139 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಬಾಂಗ್ಲಾ ತಂಡ 59 ರನ್‌ಗಳ ಗೆಲುವು ಸಾಧಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಕ್ವಾಂಡೋ ಸ್ಪರ್ಧೆ: ಪಾಣೆಮಂಗಳೂರಿನ ಆಯಿಶಾ ಹಫೀಝ್‌ಗೆ ಚಿನ್ನ
1989ರಿಂದ 9 ಬಾರಿ ಫೈನಲ್ ತಲುಪಿರುವ ಭಾರತ 8 ಬಾರಿ (1989, 2003, 2012, 2013/14, 2016, 2018, 2019, 2021 ರಲ್ಲಿ) ಪ್ರಶಸ್ತಿ ಗೆದ್ದುಕೊಂಡಿದೆ. ಇದೇ ಮೊದಲ ಬಾರಿಗೆ ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಆದ್ರೆ ಬಾಂಗ್ಲಾದೇಶ ಮೂರು ಬಾರಿ ಫೈನಲ್ ತಲುಪಿ ಸತತ 2ನೇ ಬಾರಿಗೆ (2023, 2024) ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇನ್ನುಳಿದಂತೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಲಾ ಒಂದು ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಇದನ್ನೂ ಓದಿ: ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ಸ್ವೀಕಾರ – ಇಂದಿನಿಂದ ಹೊಸ ಅಧ್ಯಾಯ