ಧಾರವಾಡ: ನನ್ನ ಹೆಸರು ಯು.ಟಿ.ಖಾದರ್ ಎಂದು ಹೇಳಿದ ತಕ್ಷಣ ವಿಮಾನ ನಿಲ್ದಾಣದಲ್ಲಿ ಒಂದು ಸಾರಿ ಅಲ್ಲ, ಬದಲಾಗಿ ಎರಡು ಸಾರಿ ತಪಾಸಣೆ ಮಾಡಲಾಗುತ್ತೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದರು.
ಧಾರವಾಡದ ಕಲಾಭವನದಲ್ಲಿ ನಡೆದಿರುವ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಈ ರೀತಿಯಾದರೂ ನಾವು ಏನು ಮಾಡೊಕೆ ಆಗಲ್ಲ, ತಾಳ್ಮೆಯಿಂದ ಇರಲೇಬೇಕಾಗುತ್ತೆ ಎಂದು ಹೇಳಿದರು.
ಇನ್ನು ಯಾಕೆ ಎರಡು ಸಾರಿ ತಪಾಸಣೆ ಮಾಡಿದ್ರು ಎಂದು ಕೇಳೊಕೆ ಕೂಡಾ ಆಗದ ಸ್ಥಿತಿ ಬಂದಿದೆ ಎಂದ ಅವರು, ಮುಸ್ಲಿಮರಿಗೆ ಸರ್ಕಾರಿ ಕ್ಷೇತ್ರ ಹಾಗೂ ಇತರೆ ಕಡೆ ಕೆಲಸ ನಿರ್ವಹಿಸಲು ಸ್ವಲ್ಪ ಜಾಸ್ತಿನೇ ತೊಂದರೆಯಾಗುತ್ತಿದೆ. ಇನ್ನು ಜನಪ್ರತಿನಿಧಿಯಾಗಿರಲಿ ಅಥವಾ ಅಧಿಕಾರಿಯಾಗಿರಲಿ ನಾವು ಜನರೊಂದಿಗೆ ಪ್ರೀತಿಪೂರ್ವಕವಾಗಿ ಇರಬೇಕು ಎಂದು ಅವರು ಹೇಳಿದರು.