ಬೆಂಗಳೂರು: ನಾವು ರೆಸಾರ್ಟ್‍ಗೆ ಹೋಗಿದಕ್ಕೆ ಬಿಜೆಪಿಯವರು ರೆಸಾರ್ಟ್ ಬಿಟ್ಟು ವಾಪಾಸ್ ಬರ್ತಿದ್ದಾರೆ. ಆಪರೇಷನ್ ಕಮಲ ಮುಕ್ತಾಯ ಮಾಡೋಕೆ ನಾವು ರೆಸಾರ್ಟ್ ಆಪರೇಷನ್ ಶುರುಮಾಡಿದ್ದು ಅಂತ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಬಿಜೆಪಿಯವರನ್ನ ಟೀಕಿಸಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲ ವಿಫಲವಾದ ಹಿನ್ನೆಲೆ ಶಾಸಕರು ವಾಪಸಾಗುತ್ತಿದ್ದಾರೆ. ಬಿಜೆಪಿಯವರು 10 ದಿನಗಳ ಕಾಲ ರೆಸಾರ್ಟ್‍ನಲ್ಲೆ ಇರುವಂತಹ ಕೆಲಸವೇನಿತ್ತು. ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋದವರ ಕಥೆ ಏನಾಗಿದೆ ಎಂಬುದನ್ನು ಅತೃಪ್ತರು ತಿಳಿಯಬೇಕು. ವಿಶೇಷವಾಗಿ ಮುಂಬೈನಲ್ಲಿ ಇರೋ ಶಾಸಕರು ಅರ್ಥ ಮಾಡಿಕೊಳ್ಳಲಿ ಎಂದ ಖಾದರ್ ಹೇಳಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೆ ಹಬ್ಬ ಇದ್ದರು ಕೂಡ ಬಿಜೆಪಿ ಅವರು ತಮ್ಮ ಶಾಸಕರನ್ನ ದೆಹಲಿಗೆ ಕರೆದೊಯ್ದರು. ಬಿಜೆಪಿ ಅವರು ಕಳೆದ 6 ತಿಂಗಳಿಂದ ಸಮ್ಮಿಶ್ರ ಸರ್ಕಾರ ಬೀಳತ್ತೆ ಅಂತಾನೇ ಹೇಳಿಕೊಂಡು ಬಂದಿದ್ದಾರೆ. ಆದ್ರೆ ನಮ್ಮ ಸರ್ಕಾರಕ್ಕೆ ಯಾವುದೇ ಆಪಾಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿಯವರು ಆಪರೇಷನ್ ಕಮಲ ಶುರುಮಾಡಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರ ಪರಿಸ್ಥಿತಿ ಏನಾಗಿದೆ ಯೋಚಿಸಿ. ನಿನ್ನೆ ನಾವು ರೆಸಾರ್ಟ್‍ಗೆ ಹೋಗಿದ್ದಕ್ಕೆ ಬಿಜೆಪಿಯವರು ರೆಸಾರ್ಟ್ ಬಿಟ್ರು. ಅವರು ರೆಸಾರ್ಟ್ ಬಿಟ್ಟು ರಾಜ್ಯಕ್ಕೆ ಬರಲಿ ಅಂತ ನಾವು ರೆಸಾರ್ಟ್‍ಗೆ ಹೋದೆವು ಎಂದು ಯು.ಟಿ ಖಾದರ್ ಹೇಳಿದ್ದಾರೆ.
Advertisement
Advertisement
ಕಾಂಗ್ರೆಸ್ ಶಾಸಕರಲ್ಲಿರುವ ಒಗ್ಗಟ್ಟಿನ ಸಂದೇಶ ತಿಳಿದು ಬಿಜೆಪಿಯವರು ವಾಪಾಸ್ಸಾಗುತ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲ ಎಂಡ್ ಮಾಡೋಕೆ ನಮ್ಮಿಂದ ರೆಸಾರ್ಟ್ ಆಪರೇಷನ್ ಸ್ಟಾರ್ಟ್ ಆಗಿದ್ದು. ರೆಸಾರ್ಟ್ ವಾಸ್ತವ್ಯ ಯಾವಾಗ ಮುಗಿಯುತ್ತೋ ಅದನ್ನ ಪಕ್ಷದ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಯು.ಟಿ ಖಾದರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv