ಮಂಗಳೂರು: ಉನ್ನತ ಸ್ಥಾನದಲ್ಲಿದ್ದರು ಯಾವುದೇ ಬೇಸರವಿಲ್ಲದೆ ರಸ್ತೆ ಮಧ್ಯೆ ಟ್ರಾಫಿಕ್ ಪೋಲಿಸ್ ಜೊತೆ ಟ್ರಾಫಿಕ್ ಸೇವಕನಾಗಿ ನಿಂತ್ಕೊಂಡು ಸುಗಮವಾಗಿ ವಾಹನಗಳು ಸಂಚರಿಸುವಂತೆ ಸಚಿವರೊಬ್ಬರು ಕೆಲಸ ಮಾಡಿದ್ದಾರೆ.
ಸಚಿವರಾದ ಮೇಲೆ ಝೀರೋ ಟ್ರಾಫಿಕ್‍ನಲ್ಲಿ ಓಡಾಡೋರನ್ನ ನೋಡಿದ್ದೀರಾ. ಆದ್ರೆ ಉನ್ನತ ಸ್ಥಾನದಲ್ಲಿದ್ದು, ಸಚಿವರಾಗಿದ್ದರೂ ಯಾವುದೇ ಮುಲಾಜಿಲ್ಲದೆ ಟ್ರಾಫಿಕ್ ಕೆಲಸ ಮಾಡೋದನ್ನ ನೀವು ನೋಡಿರಲ್ಲ. ಆದ್ರೆ ವಸತಿ ಹಾಗೂ ನಗರ ಪಾಲಿಕೆಗಳ ಸಚಿವರಾದ ಯುಟಿ ಖಾದರ್ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಸೇವಕನಾಗಿ ಸಲೀಸಾಗಿ ವಾಹನ ಸಂಚರಿಸುವಂತೆ ಕೆಲಸ ಮಾಡಿ ಟ್ರಾಫಿಕ್ ಪೊಲೀಸರಿಗೆ ಸಹಾಯ ಮಾಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಪಂಪ್ ವೆಲ್ ಬಳಿ ನಿರ್ಮಾಣವಾಗುತ್ತಿರುವ ಫ್ಲೈಓವರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ದಿನ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಇಂದು ಸಚಿವ ಯುಟಿ ಖಾದರ್ ಪಂಪ್ ವೆಲ್ ಮಾರ್ಗದಲ್ಲಿ ಬರ್ತಿದ್ದಂತೆ ಟ್ರಾಫಿಕ್ ಹೆಚ್ಚಾಗಿತ್ತು. ಇದನ್ನ ಕಂಡು ಸಚಿವರು ತಾವೇ ಖುದ್ದಾಗಿ ಕಾರಿನಿಂದ ಇಳಿದು ಪೊಲೀಸರ ಜೊತೆಗೆ ನಿಂತು ಟ್ರಾಫಿಕ್ ನಿರ್ವಹಣೆ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv