ವಾಷಿಂಗ್ಟನ್: ಕಮಲಾ ಹ್ಯಾರಿಸ್ (Kamala Harris) ಆಡಳಿತ ನಡೆಸಲು ಅನರ್ಹರಾಗಿದ್ದು, ತೀವ್ರಗಾಮಿ ಎಡಪಂಥೀಯ ಮನೋಸ್ಥಿತಿಯವರು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಹಾಲಿ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೂರುವರೆ ವರ್ಷಗಳಿಂದ ಕಮಲಾ ಹ್ಯಾರಿಸ್ ಅವರು ಜೋ ಬೈಡೆನ್ (Joe Biden) ಮಾಡಿದ ದುರಂತದ ಚಾಲನಾ ಶಕ್ತಿಯಾಗಿದ್ದಾರೆ. ಅವರೆನಾದರೂ ಅಧಿಕಾರಕ್ಕೆ ಏರಿದರೆ ನಮ್ಮ ದೇಶವನ್ನು ದೇಶವನ್ನು ನಾಶಮಾಡುತ್ತಾರೆ. ಅಮೆರಿಕವನ್ನು (USA) ನಾಶ ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಹೆಚ್‌ಡಿಡಿ, ಹೆಚ್‌ಡಿಕೆ – ಮಹತ್ವದ ವಿಚಾರಗಳ ಕುರಿತು ಚರ್ಚೆ
ಹ್ಯಾರಿಸ್‌ಗೆ ಹಾಕುವ ಒಂದು ಮತ ಇನ್ನೂ ನಾಲ್ಕು ವರ್ಷಗಳ ಅಪ್ರಾಮಾಣಿಕತೆ, ಅಸಮರ್ಥತೆ, ದೌರ್ಬಲ್ಯ ಮತ್ತು ವೈಫಲ್ಯಕ್ಕೆ ಹಾಕುವ ಮತವಾಗುತ್ತದೆ ಎಂದು ಟ್ರಂಪ್ ಹೇಳಿದರು. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್ ಮುಕ್ತ – ಈ ಷರತ್ತು ಅನ್ವಯ
ಕಮಲಾ ಹ್ಯಾರಿಸ್ ಮುಟ್ಟಿದ್ದೆಲ್ಲವೂ ದುರಂತವಾಗುತ್ತದೆ ಎಂದು ಆರೋಪಿಸಿದ ಅವರು, ಉಕ್ರೇನ್ ದಾಳಿ ಮಾಡದಂತೆ ರಷ್ಯಾವನ್ನು ತಡೆಯಲು ಕಮಲಾ ಹ್ಯಾರಿಸ್ ಅವರನ್ನು ಯುರೋಪ್‌ಗೆ ಕಳುಹಿಸಿದಾಗ ಏನಾಯ್ತು? ಅವರು ತೆರಳಿದ ಐದು ದಿನಗಳ ನಂತರ ರಷ್ಯಾ ದಾಳಿ ಮಾಡುವ ಮೂಲಕ ಉತ್ತರಿಸಿತು. ಪುಟಿನ್ ಏನಿಲ್ಲವೆಂಬಂತೆ ಅವರನ್ನು ನೋಡಿ ನಕ್ಕರು. ಕಮಲಾ ಮುಟ್ಟಿದ್ದೆಲ್ಲವೂ ಸಂಪೂರ್ಣ ವಿಪತ್ತಿಗೆ ಕಾರಣವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.