ಮಂಡ್ಯ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟಿಪ್ಪರ್‌ನ (Tipper) ಚಕ್ರ ಬ್ಲಾಸ್ಟ್ (Tyre Blast) ಆಗಿದ್ದು, ಘಟನೆಯಿಂದ ಸಂಭವಿಸಬೇಕಿದ್ದ ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಮಂಡ್ಯದ (Mandya) ಉಮ್ಮಡಹಳ್ಳಿ ಗೇಟ್ ಬಳಿ ಘಟನೆ ಸಂಭವಿಸಿದ್ದು, ಕಲ್ಲಿನ ಪುಡಿ ತುಂಬಿಕೊಂಡು ವೇಗವಾಗಿ ಹೋಗುತ್ತಿದ್ದ ಟಿಪ್ಪರ್‌ನ ಚಕ್ರ ಬ್ಲಾಸ್ಟ್ ಆಗಿದೆ. ಘಟನೆಯ ಪರಿಣಾಮ ಟಿಪ್ಪರ್‌ನ ಟೈರ್‌ನ ಮಡ್‌ಗಾರ್ಡ್ (Mud Guard) ಹಿಂದೆ ಬರುತ್ತಿದ್ದ ಕಾರಿನ (Car) ಹಿಂಭಾಗಕ್ಕೆ ಹೋಗಿ ಬಿದ್ದಿದೆ. ಒಂದು ವೇಳೆ ಈ ಮಡ್‌ಗಾರ್ಡ್ ಏನಾದರೂ ಕಾರಿಗೆ ಬಡಿದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್‍ಗಿರಿ – ಆಟೋ ಚಾಲಕನಿಗೆ ಥಳಿಸಿದ ದುಷ್ಕರ್ಮಿಗಳು
ಅದೃಷ್ಟವಶಾತ್ ಮಡ್‌ಗಾರ್ಡ್ ಕಾರಿನ ಹಿಂದೆ ಬಿದ್ದಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಬಚಾವ್ ಆಗಿದ್ದಾರೆ. ಸದ್ಯ ಕೂದಲೆಳೆ ಅಂತರದಲ್ಲಿ ಡೆಡ್ಲಿ ಅಪಘಾತ ತಪ್ಪಿದ್ದು, ಅಪಘಾತ ತಪ್ಪಿದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನೀರಿನ ಟ್ಯಾಂಕ್ ಬಿದ್ದು ಇಬ್ಬರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]