ಚಿಕ್ಕೋಡಿ: ಶ್ರೀ ರಾಮಸೇನಾ ಕಾರ್ಯಕರ್ತನ ಹೆಸರಿನಲ್ಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದ ಇಬ್ಬರು ಆರೋಪಿಗಳನ್ನ ಸಂಕೇಶ್ವರ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದ ಓರ್ವ ಅಪ್ರಾಪ್ತ ಹಾಗೂ 19 ವರ್ಷದ ಮಹಾವೀರ ಚೌಗಲಾ ಬಂಧಿತ ಆರೋಪಿಗಳು.
2018 ಜುಲೈ 12 ರಂದು ರಾಮಸೇನಾ ಕಾರ್ಯಕರ್ತ ರಮೇಶ್ ಅಕ್ಕಿವಾಟೆ ಎಂಬ ಹೆಸರಲ್ಲಿ ಎಫ್ ಬಿ ಅಕೌಂಟ್ ಸೃಷ್ಟಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿ ಪೋಸ್ಟ್ ಮಾಡಿದ್ದ ಖದೀಮರು ರಮೇಶ್ ಅಕ್ಕಿವಾಟೆಯನ್ನ ಪೊಲೀಸ್ ಠಾಣೆ ಮೆಟ್ಟಿಲು ಏರಿಸಿದ್ದರು.
ಆದ್ರೆ ರಮೇಶ್ ಅಕ್ಕಿವಾಟೆ ಈ ಕೃತ್ಯ ನಡೆಸಿಲ್ಲ ಎಂದು ಖಚಿತಪಡಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಸೈಬರ್ ಕ್ರೈಂ ಪೊಲೀಸರ ನೆರವಿನಿಂದ ದುಷ್ಕೃತ್ಯವೆಸಗಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೇರೆ ಅವರ ಹೆಸರನ್ನ ಬಳಿಸಿ ಸಮಾಜಘಾತುಕ ಕೆಲಸ ಮಾಡಿದ ಇಬ್ಬರು ಆರೋಪಿಗಳು ಈಗ ಕಂಬಿ ಎಣಿಸುವ ಹಾಗೆ ಆಗಿದೆ. ಈ ಇಬ್ಬರು ಆರೋಪಿಗಳ ವಿರುದ್ಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv