Connect with us

ಮೂತ್ರ ವಿಸರ್ಜನೆ ವಿಷಯದಲ್ಲಿ ಜಗಳ: ಯುವಕರ ನಡುವೆ ಮಾರಾಮಾರಿ

ಮೂತ್ರ ವಿಸರ್ಜನೆ ವಿಷಯದಲ್ಲಿ ಜಗಳ: ಯುವಕರ ನಡುವೆ ಮಾರಾಮಾರಿ

ಗದಗ: ಮೂತ್ರ ವಿಸರ್ಜನೆ ವಿಷಯದಲ್ಲಿ ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಯುವಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ಗದಗ ನಗರದ ಮುಳಗುಂದದ ನಾಕಾ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಸಂತೋಷ್ ರೊಖಡೆ ಮತ್ತು ಮುಸ್ತಾಕ್ ಛಬ್ಬಿ ನಡುವೆ ಮೂತ್ರ ವಿಸರ್ಜನೆಯ ವಿಷಯವಾಗಿ ಜಗಳ ನಡೆದಿದೆ. ಮುಸ್ತಾಕ್ ವ್ಯಾಪಾರ ಮಾಡುವ ಸ್ಥಳದಲ್ಲಿ ಸಂತೋಷ್ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮುಸ್ತಾಕ್, ಸಂತೋಷ್‍ನನ್ನು ಪ್ರಶ್ನೆ ಮಾಡಿದ್ದಾನೆ. ಈ ಸಂದರ್ಭ ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಪರಸ್ಪರ ಎದೆ, ಬೆನ್ನು, ಹೊಟ್ಟೆಗೆ ಇರಿದು ಹಲ್ಲೆ ಮಾಡಿದ್ದಾರೆ.

ಸಂತೋಷ್ ರೊಖಡೆ

ಮುಸ್ತಾಕ್ ಮತ್ತು ಸಂತೋಷ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಮುಸ್ತಾಕ್‍ರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹಾಗೂ ಸಂತೋಷ್‍ನನ್ನು ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.