ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ ಇಬ್ಬರು ಯುವಕರ ಅಂಗಾಂಗಗಳನ್ನ ಪಡೆಯುವಲ್ಲಿ ನಿಮಾನ್ಸ್ ಆಸ್ಪತ್ರೆಯ (Nimhans Hospital) ಡಿಸಿಪ್ಲನರಿ ಟೀಂ, ಬ್ರೀಫ್ ಕೌನ್ಸಲರ್‌ಗಳು ಯಶಸ್ವಿಯಾಗಿದ್ದಾರೆ. ನಿಮಾನ್ಸ್ ಆಸ್ಪತ್ರೆಯ ಇತಿಹಾಸದಲ್ಲಿಯೇ ಏಕಕಾಲಕ್ಕೆ 2 ಕುಟುಂಬದವರನ್ನ ಮನವೊಲಿಸಿ, ಸಾವಿನಂಚಿನಲ್ಲಿದ್ದ ರೋಗಿಗಳಿಗೆ ಅಂಗಾಂಗಳನ್ನ ದಾನ (Organ donation) ಮಾಡುವ ಮೂಲಕ ನಿಮಾನ್ಸ್ ಆಸ್ಪತ್ರೆ ಆ ರೋಗಿಗಳಿಗೆ ಮರುಜನ್ಮ ನೀಡಿದೆ.
Advertisement
ಕಳೆದ 15 ದಿನಗಳ ಹಿಂದೆ ಕಲಬುರಗಿ (Kalaburagi) ಜಿಲ್ಲೆಯ ಗೊಣಗಿ ಗ್ರಾಮದ 33 ವರ್ಷದ ಕೈಲಾಸ್ ಹಾಗೂ ಆಂಧ್ರಪ್ರದೇಶ ಕಡಪದ 27 ವರ್ಷದ ಸುರೇಂದ್ರ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿದ್ರು. ಚಿಕಿತ್ಸೆ ಫಲಕಾರಿಯಾದೇ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ – ಹೆಗಲ ಮೇಲೆ ಹೊತ್ತು ಕಾರ್ಯಕರ್ತರ ಸಂಭ್ರಮ
Advertisement
Advertisement
ಈ ವೇಳೆ ಮೃತ ಯುವಕರ ಕುಟುಂಬಸ್ಥರನ್ನ ಸಂಪರ್ಕಿಸಿದ ಡಾ. ಕಣ್ಮಣಿ ತಂಡದ ಬ್ರೀಫ್ ಕೌನ್ಸಲರ್‌ಗಳು ಸತತ 27 ಬಾರಿ ಅವ್ರನ್ನ ಮನವೊಲಿಸಿ ಅಂಗಾಂಗ ದಾನಗಳನ್ನ ಮಾಡಲು ಒಪ್ಪಿಸಿದ್ದಾರೆ.
Advertisement
ಕಣ್ಣು ಕಿಡ್ನಿ, ಹಾರ್ಟ್ ವಾಲ್ಸ್, ಲಿವರ್ ಅಂಗಾಂಗಗಳನ್ನ ದಾನ ಮಾಡಲು ಕುಟುಂಬಸ್ಥರೇ ಒಪ್ಪಿಕೊಂಡಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದು, ಇನ್ನೊಬ್ಬರ ಬದುಕಿಗೆ ಕುಟುಂಬಸ್ಥರು ನೆರವಾಗಿದ್ದಾರೆ.
ಈ ವರ್ಷದಲ್ಲಿ ನಿಮಾನ್ಸ್ ಆಸ್ಪತ್ರೆಯಲ್ಲಿ 6 ಜನರ ಅಂಗಾಂಗಗಳನ್ನ ಪಡೆಯಲಾಗಿದ್ದು, ಅಂಗಾಂಗ ದಾನದ ಬಗ್ಗೆಯೂ ಜಾಗೃತಿ ಮೂಡಿಸ್ತಿದ್ದಾರೆ. ಇದನ್ನೂ ಓದಿ: ಜರ್ಮನಿಯ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಕಾರು ದಾಳಿ – ಇಬ್ಬರು ಸಾವು, 60 ಮಂದಿಗೆ ಗಾಯ