ಯಾದಗಿರಿ: ಬೈಕಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದ ಬಳಿ ನಡೆದಿದೆ.
ಏವೂರು ದೊಡ್ಡ ತಾಂಡ ನಿವಾಸಿಗಳಾದ ಅನೀಲ್ ರಾಥೋಡ್ (23) ಮತ್ತು ರಾಮು ಚವಾಣ (27) ಮೃತ ದುರ್ದೈವಿಗಳು. ಲಾರಿ ಶಹಾಪುರದಿಂದ ಸಿಂದಗಿ ಕಡೆ ತೆರಳುತ್ತಿತ್ತು. ಬೈಕಿನಲ್ಲಿ ಇಬ್ಬರು ಯವಕರು ಮದುವೆ ಕಾರ್ಡ್ ಕೊಡಲು ಏವೂರ ದಿಂದ ಏವೂರು ದೊಡ್ಡ ತಾಂಡದ ಕಡೆಗೆ ತೆರಳುತ್ತಿದ್ದರು.
Advertisement
Advertisement
ಈ ವೇಳೆ ಏವೂರ ಗ್ರಾಮದ ಬಳಿ ಟೆಂಪೋವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಈ ಅಪಘಾತದಲ್ಲಿ ಪಾದಚಾರಿಯೊಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಶಹಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement