ಉಡುಪಿ: ಹೊಳೆಗೆ ಈಜಲು ತೆರಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಆವರ್ಸೆ ಸಮೀಪ ನಡೆದಿದೆ.
ಕಿರಣ್ ಪೂಜಾರಿ ಮತ್ತು ವಿಕ್ರಂ ಪೂಜಾರಿ ಮೃತ ದುರ್ದೈವಿಗಳು. ಇವರಿಬ್ಬರು ಚಿಕ್ಕಮ್ಮ ದೊಡ್ಡಮ್ಮನ ಮಕ್ಕಳಾಗಿದ್ದು, ಸೀತಾನದಿಯ ಆನೆಗುಂಡಿಯಲ್ಲಿ ಈ ಘಟನೆ ಸಂಭವಿಸಿದೆ. ಕಿರಣ್ ಪೂಜಾರಿ ಮತ್ತು ವಿಕ್ರಂ ಪೂಜಾರಿ ಆವರ್ಸೆ ಹೊಳೆಗೆ ಕೈ ಕಾಲು ತೊಳೆದುಕೊಂಡು ಬರುತ್ತೇವೆ ಎಂದು ಹೋಗಿದ್ದರು.
Advertisement
ಹೊಳೆಗೆ ಹೋದವರು ತುಂಬ ಹೊತ್ತು ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಕಿರಣ್ ಗೆ ಮೂರ್ಛೆ ರೋಗವಿದ್ದು, ನೀರಿಗಿಳಿದಾಗ ಸಮಸ್ಯೆ ಕಾಣಿಸಿಕೊಂಡು ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ವಿಕ್ರಂ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
Advertisement
ಈ ಘಟನೆ ಸಂಬಂಧ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement