ಭಾರತದ ಸ್ವಾತಂತ್ರ್ಯ ದಿನವೇ ಅಫ್ಘಾನಿಸ್ತಾನದ ತಾಲಿಬಾನ್ (Taliban) ಅಧಿಕಾರಕ್ಕೆ ಮರಳಿ ಎರಡು ವರ್ಷಗಳನ್ನು ಪೂರೈಸಿತು. 20 ವರ್ಷಗಳ ಅನಿರ್ದಿಷ್ಟ ಯುದ್ಧದ ನಂತರ ಅಮೆರಿಕ ಪಡೆಗಳು ಅಫ್ಘಾನಿಸ್ತಾನದಿಂದ (Afghanistan) ವಾಪಸ್ ಆದ ಬಳಿಕ ತಾಲಿಬಾನ್ ಅಧಿಕಾರಕ್ಕೆ ಮರಳಿತು. ಇಸ್ಲಾಮಿಕ್ ವ್ಯವಸ್ಥೆಯಡಿ ದೇಶದಲ್ಲಿ ಭದ್ರತೆಯನ್ನು ಪುನಃಸ್ಥಾಪಿಸಲು ಹೊರಟಿದ್ದೇವೆ ಎಂದು ಈ ವೇಳೆ ತಾಲಿಬಾನ್ ಸಂಘಟನೆ ಹೇಳಿತ್ತು.
ಉಗ್ರಗಾಮಿ ಸಂಘಟನೆ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಮಹಿಳೆಯರ (Women) ಪರಿಸ್ಥಿತಿ ಹೀನಾಯ ಪರಿಸ್ಥಿತಿಗೆ ತಲುಪಿದೆ. ಮಹಿಳೆಯರಿಗೆ ಚೌಕಟ್ಟಿನೊಳಗೆ ಅಧ್ಯಯನ ಮಾಡಲು ಮತ್ತು ಕೆಲಸ ಮಾಡಲು ಅವಕಾಶ ನೀಡಲಿದ್ದೇವೆ. ಮಹಿಳೆಯರು ನಮ್ಮ ಸಮಾಜದಲ್ಲಿ ತುಂಬಾ ಸಕ್ರಿಯರಾಗಲಿದ್ದಾರೆ ಎಂದು ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ಸ್ವಲ್ಪ ಸಮಯದ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿಕೊಂಡಿತ್ತು. ಆದರೆ ತಾಲಿಬಾನ್ ತನ್ನ ಭರವಸೆಯನ್ನು ಉಳಿಸಿಕೊಂಡಿಲ್ಲ.
Advertisement
ಸೆಪ್ಟೆಂಬರ್ 2021 ರಲ್ಲಿ ಬಾಲಕಿಯರಿಗೆ ಶಾಲೆಗೆ ಹೋಗದಂತೆ ನಿರ್ಬಂಧಿಸಲಾಯಿತು. ಬಳಿಕ ಕಾಬೂಲ್ ನಗರ ಆಡಳಿತ ವಿಭಾಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮನೆಯಲ್ಲೇ ಇರುವಂತೆ ಹೇಳಲಾಯಿತು. ಪುರುಷರಿಂದ ಮಾಡಲಾಗದ ಕೆಲಸಗಳನ್ನು ಹೊಂದಿರುವ ಮಹಿಳೆಯರಿಗೆ ಮಾತ್ರ ಮುಂದುವರೆಯಲು ಅವಕಾಶ ನೀಡಲಾಯಿತು.
Advertisement
Advertisement
ಡಿಸೆಂಬರ್ 2021 ರಲ್ಲಿ ಮಹಿಳೆಯರು 72 ಕಿ.ಮೀ (45 ಮೈಲುಗಳು) ಗಿಂತ ಹೆಚ್ಚು ದೂರ ಪ್ರಯಾಣಿಸುತ್ತಿದ್ದರೆ ಪುರುಷ ಸಂಬಂಧಿ ಇರಬೇಕೆಂದು ಆದೇಶವನ್ನು ಹೊರಡಿಸಿತು. ಈ ವಿಚಾರವಾಗಿ ಮಹಿಳೆಯರು ಹೋರಾಟ ನಡೆಸಿದ್ದರು. ಅವರನ್ನು ತಾಲಿಬಾನ್ ಹಿಂಸಾತ್ಮಕವಾಗಿ ಶಿಕ್ಷಿಸಿತ್ತು.
Advertisement
ಜನವರಿ 2022 ರಲ್ಲಿ ಕನಿಷ್ಠ ನಾಲ್ಕು ಮಹಿಳಾ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಯಿತು. ವಾರಗಟ್ಟಲೆ ಹಿಡಿದು ಅವರನ್ನು ಕಸ್ಟಡಿಯಲ್ಲಿ ಥಳಿಸಿದರು. 21 ಮಾರ್ಚ್ 2023 ರಂದು ತಾಲಿಬಾನ್ ಶಿಕ್ಷಣ ಇಲಾಖೆಯು ಎಲ್ಲಾ ವಿದ್ಯಾರ್ಥಿಗಳು ಹೊಸ ಶೈಕ್ಷಣಿಕ ಅವಧಿಯ ಪ್ರಾರಂಭದಲ್ಲಿ ಶಾಲೆಗೆ ಮರಳಲು ಸಾಧ್ಯವಾಗುತ್ತದೆ ಎಂದು ಘೋಷಿಸಿದೆ.
ಮೇ 7, 2022 ರಂದು ಮಹಿಳೆಯರಿಗೆ ತಲೆಯಿಂದ ಕಾಲಿನವರೆಗೆ ಉಡುಪುಗಳನ್ನು ಕಡ್ಡಾಯಗೊಳಿಸುವ ಆದೇಶವನ್ನು ಸರ್ಕಾರ ಪ್ರಕಟಿಸಿತು. ಈ ಕ್ರಮವನ್ನು ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ ಹೈಬತುಲ್ಲಾ ಅಖುಂಡ್‌ಜಾದಾ ಅನುಮೋದಿಸಿದ್ದಾನೆ. ಈ ಆದೇಶದ ಅಡಿಯಲ್ಲಿ ಮಹಿಳೆಯರು ತಮ್ಮ ಕಣ್ಣುಗಳನ್ನು ಹೊರತುಪಡಿಸಿ ತಮ್ಮ ಮುಖಗಳನ್ನು ಸಹ ಮುಚ್ಚಿಕೊಳ್ಳಬೇಕು. ಇಲ್ಲದಿದ್ದರೆ ಅವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಬಳಿಕ ಮಹಿಳೆಯರು ಸಡಿಲವಾದ ಕಪ್ಪು ಅಬಯಾಸ್ (ಗೌನ್) ಮತ್ತು ಹಿಜಾಬ್ ಧರಿಸಲು ಪ್ರಾರಂಭಿಸಿದರು.
ಅಕ್ಟೋಬರ್ 2022ರ ಸುಮಾರಿಗೆ ಶಾಲೆಯ ಕೊನೆಯ ವರ್ಷವನ್ನು ಪೂರ್ಣಗೊಳಿಸದ ಹೆಣ್ಣು ಮಕ್ಕಳು ಸೇರಿದಂತೆ, ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳನ್ನು ಬರೆಯಬಹುದು ಎಂದು ಘೋಷಿಸಲಾಯಿತು. ನವೆಂಬರ್‌ನಲ್ಲಿ ಮಹಿಳೆಯರು ಷರಿಯಾವನ್ನು (ಇಸ್ಲಾಮಿಕ್ ಕಾನೂನು) ಅನುಸರಿಸದ ಕಾರಣ ಕಾಬೂಲ್ ಉದ್ಯಾನವನಗಳಿಂದ ನಿಷೇಧಿಸಲಾಯಿತು. ಈಜು ಕೊಳಗಳು ಮತ್ತು ಸಾರ್ವಜನಿಕ ಸ್ನಾನಗೃಹಗಳಿಗೆ ಹೋಗುವುದನ್ನು ಸಹ ನಿಷೇಧಿಸಲಾಗಿದೆ.
ಡಿಸೆಂಬರ್ 20, 2022 ರಂದು ತಾಲಿಬಾನ್ ಉನ್ನತ ಶಿಕ್ಷಣ ಸಚಿವ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದರು. ತಾಲಿಬಾನ್‌ನ ಆರ್ಥಿಕ ಸಚಿವಾಲಯವು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಎನ್‌ಜಿಒಗಳು ತಮ್ಮ ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ಬರುವುದನ್ನು ನಿಲ್ಲಿಸುವಂತೆ ಆದೇಶಿಸಲಾಯಿತು.
ಜುಲೈ 2023 ರಲ್ಲಿ, ತಾಲಿಬಾನ್ ಸರ್ಕಾರವು ಬ್ಯೂಟಿ ಪಾರ್ಲರ್‌ಗಳು ಮತ್ತು ಸಲೂನ್‌ಗಳನ್ನು ಮುಚ್ಚುವುದಾಗಿ ಘೋಷಿಸಿತು, ಹಲವಾರು ಮಹಿಳೆಯರ ಆದಾಯದ ಮೂಲವನ್ನು ಕಸಿದುಕೊಂಡಿತು.
ಸುಮಾರು 4 ಕೋಟಿ ಜನರಿರುವ ದೇಶದಲ್ಲಿ, ಈ ವರ್ಷ ಸುಮಾರು 1.50 ಕೋಟಿ ಜನರು ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಆಫ್ಘನ್ನರ ಮೂಲಭೂತ ಆರೋಗ್ಯ ಸೇವೆಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಜನಸಂಖ್ಯೆಯ ಸುಮಾರು 20% ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಮತ್ತು 4 ಮಿಲಿಯನ್ ಜನರು ಮಾದಕ ವ್ಯಸನದಿಂದ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಹೆಚ್ಚಿನ ಆರೋಗ್ಯ ಸೌಲಭ್ಯಗಳು ಕಳಪೆ ಮೂಲಸೌಕರ್ಯವನ್ನು ಹೊಂದಿವೆ. ವಲಸೆ, ಮಹಿಳೆಯರ ಓಡಾಟಕ್ಕೆ ನಿರ್ಬಂಧ ಮತ್ತು ಉದ್ಯೋಗದ ಮೇಲಿನ ಮಿತಿಗಳಿಂದ ಕಡಿಮೆ ಅರ್ಹ ಆರೋಗ್ಯ ಕಾರ್ಯಕರ್ತರಿದ್ದಾರೆ. ಇದು ಅಲ್ಲಿನ ಅರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೂ ಕಾರಣವಾಗಿದೆ.
Web Stories