ತುಮಕೂರು: ಸೊಸೆ ಮೇಲಿನ ಕೋಪಕ್ಕೆ ಏನೂ ಅರಿಯದ 2 ವರ್ಷದ ಪುಟಾಣಿ ಮೊಮ್ಮಗಳನ್ನು ಅತ್ತೆ ಬಲಿ ಪಡೆದಿರುವ ಅಮಾನವೀಯ ಘಟನೆ ಕುಣಿಗಲ್ ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದಿದೆ.
Advertisement
ತ್ರಿಷಾ ಮೃತಪಟ್ಟ ಮಗು. ಹುಚ್ಚು ನಾಯಿ ಕಡಿತಕ್ಕೆ ಒಳಗಾದ 1 ತಿಂಗಳು 10 ದಿನದ ನಂತರ ಮಗು ಮೃತಪಟ್ಟಿದೆ. ಆರೋಪಿ ಜಯಮ್ಮ, ಹಸು ಮೇಯಿಸಲು ಹೊಲದ ಬಳಿ ಹೋಗುವಾಗ ತನ್ನ ಜೊತೆ ಮಗುವನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಹುಚ್ಚು ನಾಯಿಯೊಂದು ಹಸು ಹಾಗೂ ಮಗುವಿಗೆ ಕಚ್ಚಿದೆ. ಆದರೆ ಸೊಸೆ ಮೇಲಿನ ಕೋಪದಿಂದ ಈ ವಿಚಾರವನ್ನು ಯಾರಿಗೂ ಹೇಳದೇ ಜಯಮ್ಮ ಮುಚ್ಚಿಟ್ಟಿದ್ದರು. ಹುಚ್ಚು ನಾಯಿ ಕಡಿದ ಮೂರೇ ದಿನಕ್ಕೆ ಹಸು ಮೃತಪಟ್ಟಿತ್ತು. ಕಳೆದ ಒಂದು ವಾರದ ಹಿಂದೆ ಮಗು ತ್ರಿಷಾ ರಕ್ತ ವಾಂತಿ ಮಾಡಿಕೊಂಡಿತ್ತು. ಈ ವೇಳೆ ಪಾಲಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ಯಾವುದೋ ಬೆಕ್ಕು, ಇಲ್ಲ ನಾಯಿ ಕಚ್ಚಿರುವ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು. ಮಗು ಗಂಭೀರ ಸ್ಥಿತಿ ತಲುಪಿದ ಬಳಿಕ ಜಯಮ್ಮ ಹುಚ್ಚು ನಾಯಿ ಕಡಿದ ಬಗ್ಗೆ ಬಾಯ್ಬಿಟ್ಟರು. ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಿಜೆಪಿ ಏಜೆಂಟ್: ಕಾಂಗ್ರೆಸ್
Advertisement
Advertisement
ಘಟನೆ ನಡೆದು 1 ತಿಂಗಳು 10 ದಿನಗಳ ಬಳಿಕ ಎಲ್ಲ ವಿಚಾರವನ್ನು ಜಯಮ್ಮ ತಿಳಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಮಗ ಪುಟ್ಟರಾಜುವಿಗೆ 2 ವರ್ಷದ ಹಿಂದೆ ಚಿಕ್ಕಮ್ಮ ಅವರ ಜೊತೆ ವಿವಾಹವಾಗಿತ್ತು. ಆದರೆ ಮಗನ ವಿವಾಹದ ಬಗ್ಗೆ ಜಯಮ್ಮ ಅಸಮಾಧಾನ ಹೊಂದಿದ್ದರು. ಅತ್ತೆ-ಸೊಸೆಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳದಲ್ಲಿ ಮಗುವಿಗೆ ಹುಚ್ಚು ನಾಯಿ ಕಡಿದ ವಿಷಯವನ್ನು ಅತ್ತೆ ಬಚ್ಚಿಟ್ಟಿದ್ದರು. ಇದೀಗ ಒಂದು ಎಡವಟ್ಟು ಮಗುವಿನ ಪ್ರಾಣ ಕಸಿದಿದೆ. ಈ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಯಾವುದೇ ಧರ್ಮದ ಬಗ್ಗೆ ಅಗೌರವ ತೋರಿದ್ರೆ ಸಹಿಸುವುದಿಲ್ಲ: ಭಗವಂತ್ ಮಾನ್