ತುಮಕೂರು: ಕೈಗಾರಿಕೆಯಲ್ಲಿನ ರಾಸಾಯನಿಕ ಸಂಗ್ರಹಿಸುವ ಸಂಪ್ (Chemical Sump) ಕ್ಲೀನ್‍ಗೆ ಇಳಿದ ಇಬ್ಬರ ಕಾರ್ಮಿಕರು ಸಾವಿಗೀಡಾದ ಘಟನೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಮಧುಗಿರಿ (Madhugiri) ತಾಲೂಕಿನ ಮಾಗೋಡು ಗ್ರಾಮದ ಪ್ರತಾಪ್ (23) ಶಿರಾ ತಾಲೂಕಿನ ತರೂರು ಗ್ರಾಮದ ವೆಂಕಟೇಶ್ (32) ಮೃತ ಕಾರ್ಮಿಕರು. ಸಂಪ್ ಸ್ವಚ್ಛಗೊಳಿಸಲು ನಾಲ್ವರು ಒಳಗೆ ಇಳಿದಿದ್ದರು. ಈ ವೇಳೆ ಉಸಿರಾಟದ ಸಮಸ್ಯೆಯಾಗಿ, ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಅಸ್ವಸ್ಥರಾಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಹೇಳಿಕೆ ವಿವಾದ – ಅಶೋಕ ವಿವಿ ಪ್ರೊಫೆಸರ್‌ಗೆ ಮಧ್ಯಂತರ ಜಾಮೀನು
ಲೊರಸ್ ಬಯೋ ಎಂಬ ರಾಸಾಯನಿಕ ಪದಾರ್ಥ ತಯಾರಿಸುವ ಕೈಗಾರಿಕೆಯಲ್ಲಿ ಈ ಅವಘಡ ಸಂಭವಿಸಿದೆ. ಶಿರಾ ತಾಲೂಕಿನ ತರೂರು ಗ್ರಾಮದ ಮಂಜಣ್ಣ ಹಾಗೂ ಯುವರಾಜ್‍ಗೆ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಿಡಲಾಗುತ್ತಿದೆ.
ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೇಟೆಗೆ ಹೋಗಿದ್ದಾಗ ಮಿಸ್ ಫೈರ್ – ಹಾರಿಹೋಯ್ತು ಯುವಕನ ಪ್ರಾಣಪಕ್ಷಿ