ಭೋಪಾಲ್: ಇತ್ತೀಚಿನ ದಿನಗಳಲ್ಲಿ 2-3 ವದುವೆಯಾದ (Marriage) ಮಹಾಶಯರು ಸಿಗೋದು ಕಡಿಮೆಯೇನಿಲ್ಲಾ. ಮದುವೆಯಾದ್ರೂ ಸಿನಿಮೀಯ ರೀತಿಯಲ್ಲಿ ಸುಖ ಸಂಸಾರ ನಡೆಸೋದು ಬೆರಳೆಣಿಕೆ ಮಂದಿ ಮಾತ್ರ. ಆದ್ರೆ ಮಧ್ಯಪ್ರದೇಶದಲ್ಲಿ (Madhya Pradesh) ಇಬ್ಬರು ಮುದ್ದಿನ ಹೆಂಡತಿಯರನ್ನು ಕಟ್ಟಿಕೊಂಡ ಭೂಪನೊಬ್ಬನಿಗೆ ಅವರಿಬ್ಬರ ಜೊತೆಗೂ ಸುಖ ಸಂಸಾರ ನಡೆಸುವ ಭಾಗ್ಯ ಸಿಕ್ಕಿದೆ.
ಇಬ್ಬರನ್ನೂ ಮದುವೆಯಾದ ಮನ್ಮಥನಿಗೆ ವಾರದಲ್ಲಿ 3 ದಿನ ಒಬ್ಬಳ ಜೊತೆ, ಮತ್ತೆ 3 ದಿನ ಇನ್ನೊಬ್ಬಳ ಜೊತೆ ಕಾಲ ಕಳೆಯುವ ಒಪ್ಪಂದಕ್ಕೆ ಬಂದಿದ್ದಾರೆ. ಭಾನುವಾರ ಅವನಿಗೆ ರಜಾದಿನ ಆಗಿರಲಿದ್ದು, ಆ ಒಂದು ದಿನದಲ್ಲಿ ಅವನು ಯಾರೊಂದಿಗೆ ಬೇಕಾದ್ರೂ ಉಳಿದುಕೊಳ್ಳಬಹುದು. ಮಧ್ಯಪ್ರದೇಶದ ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ (Gwalior Family Court) ಈ ವಿಚಿತ್ರ ಒಪ್ಪಂದ ನಡೆದಿದೆ.
Advertisement
Advertisement
ಏನಿದು ಎರಡು ಮದುವೆ ಸಮಾಚಾರ?
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವ್ಯಕ್ತಿ, ಹೆಂಡತಿಯನ್ನು ಗ್ವಾಲಿಯರ್‌ನಲ್ಲೇ ಬಿಟ್ಟು ತೆರಳಿದ್ದ. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಆತನಿಗೆ ಗುರುಗ್ರಾಮದಲ್ಲಿರುವ ಕಂಪನಿಯ ಸಹೋದ್ಯೋಗಿ ಜೊತೆ ಪ್ರೇಮವಾಗಿ, ಆಕೆಯನ್ನ 2ನೇ ಮದುವೆಯಾಗಿದ್ದಾನೆ. ಈ ವಿಷಯ ಬೆಳಕಿಗೆ ಬಂದಾಗ ಮೊದಲ ಪತ್ನಿ ಕೆಂಡಾಮಂಡಲವಾಗಿದ್ದಾಳೆ. ಇದನ್ನೂ ಓದಿ: ಚೀತಾ ಹೆಲಿಕಾಪ್ಟರ್ ಪತನ – ಭಾರತೀಯ ಸೇನೆಯ ಇಬ್ಬರು ಪೈಲಟ್‌ಗಳು ಹುತಾತ್ಮ
Advertisement
ಗ್ವಾಲಿಯರ್ ಮೂಲದ ಮಹಿಳೆ ಜತೆ 2018ರಲ್ಲಿ ಆತ ಮೊದಲ ಮದುವೆಯಾಗಿದ್ದ. ಅವರಿಬ್ಬರೂ 2 ವರ್ಷ ಜೊತೆಯಾಗಿ ವಾಸವಿದ್ದರು. ಕೋವಿಡ್ ಸಂದರ್ಭದಲ್ಲಿ ಆತ ಹೆಂಡತಿಯನ್ನ ತವರು ಮನೆಗೆ ಕಳುಹಿಸಿ ತಾನು ಗುರುಗ್ರಾಮಕ್ಕೆ ತೆರಳಿದ್ದ.
Advertisement
2020 ಕಳೆದರೂ ಆತ ಮರಳಿ ಬಾರದೇ ಇದ್ದಾಗ, ಮೊದಲ ಪತ್ನಿಗೆ ಆತನ ಬಗ್ಗೆ ಸಂದೇಹ ಮೂಡಿದೆ. ಆತನಿಗೆ ಗೊತ್ತಾಗದಂತೆ ಸೀದಾ ಗುರುಗ್ರಾಮದ ಕಚೇರಿಗೆ ತೆರಳಿದ್ದಾಳೆ. ಅಲ್ಲಿ ನೋಡಿದರೆ ಆತ ತನ್ನ ಸಹೋದ್ಯೋಗಿಯ ಜತೆಗೆ ಮದುವೆಯಾಗಿ ಗುಟ್ಟಾಗಿ ಸಂಸಾರ ನಡೆಸುತ್ತಿರುವುದು ತಿಳಿದುಬಂದಿದೆ. ಬಳಿಕ ಕಚೇರಿಯಲ್ಲಿ ರಂಪಾಟ ಮಾಡಿ, ನಂತರೆ ಮದುವೆ ವಿರೋಧಿಸಿ ಗ್ವಾಲಿಯರ್‌ನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಳು. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ನಂತ್ರ ಎರಡೂವರೆ ತಿಂಗಳ ಮಗು ಸಾವು – ನಕಲಿ ಡಾಕ್ಟರ್ ವಿರುದ್ಧ ಪ್ರಕರಣ ದಾಖಲು
ಇದರಿಂದ ಗ್ವಾಲಿಯರ್ ಕೋರ್ಟ್ ಪತಿಗೆ ಸಮನ್ಸ್ ನೀಡಿತ್ತು. ಆತನನ್ನು ಮನವೊಲಿಕೆ ಮಾಡಲು ಪ್ರಯತ್ನಿಸಿದರೂ, 2ನೇ ಹೆಂಡತಿ ಬಿಟ್ಟುಬರಲು ಆತ ಒಪ್ಪಲಿಲ್ಲ. ಆತನ ಹೆಂಡತಿ ಮತ್ತು 2ನೇ ಪತ್ನಿ ಕೂಡ ಆತನನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಕೊನೆಗೆ ಈ ಮೂವರೇ ಸೇರಿ ಒಂದು ಶಾಂತಿ ಒಪ್ಪಂದ ಮಾಡಿಕೊಂಡರು. ವಾರದಲ್ಲಿ ತಲಾ ಮೂರು ದಿನ ಇಬ್ಬರ ಹೆಂಡತಿಯರ ಜೊತೆ ಇರಬೇಕು. ಭಾನುವಾರದಂದು ಆತನ ಬೇಕೆನಿಸುವ ಹೆಂಡತಿ ಜತೆಗೆ ಇರುವುದು ಎಂದು ತೀರ್ಮಾನಿಸಲಾಯಿತು. ತನ್ನ ಮೊದಲ ಹೆಂಡತಿಗೆ ಹಾಗೂ ಮತ್ತೊಬ್ಬಾಕೆಗೆ ಗುರುಗ್ರಾಮದಲ್ಲಿ ಫ್ಲ್ಯಾಟ್‌ಗಳನ್ನು ನೀಡಿದ್ದು, ಅವರಿಬ್ಬರಿಗೂ ತನ್ನ ಸಂಬಳವನ್ನು ಸಮಾನವಾಗಿ ಹಂಚಲು ಕೂಡ ಒಪ್ಪಿಕೊಂಡಿದ್ದಾನೆ ಎಂದು ವಕೀಲರು ಹೇಳಿದ್ದಾರೆ.
ಕೌನ್ಸೆಲರ್ ಹಾಗೂ ವಕೀಲ (Advocate) ಹರೀಶ್ ದಿವಾನ್ ಅವರು, ಈ ಒಪ್ಪಂದ ಹಿಂದೂ ವಿವಾಹ ಕಾಯ್ದೆ (Hindu Law) ಪ್ರಕಾರ ಕಾನೂನುಬಾಹಿರ ಎಂದು ವ್ಯಾಖ್ಯಾನಿಸಿದ್ದಾರೆ.