ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ರೀಲ್ಸ್ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್ (Dance) ಮಾಡಿ ರೀಲ್ಸ್ ಕ್ರಿಯೇಟ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಅಂತಹ ಸ್ಥಳಗಳ ಪೈಕಿ ದೆಹಲಿ ಮೆಟ್ರೋ (Delhi Metro) ತಾಣವೂ ಒಂದಾಗಿದೆ.
After porn, kissing and fighting in Delhi Metro,
The latest is Pole Dancing…..
???????????????????? pic.twitter.com/RpvKJ9jLny
— Hasna Zaroori Hai ???????? (@HasnaZarooriHai) July 6, 2023
Advertisement
ಹೌದು. ದೆಹಲಿ ಮೆಟ್ರೋದಲ್ಲಿ ನಡೆಯುವ ಘಟನೆಗಳು ಆಗಾಗ್ಗೆ ಸದ್ದು ಮಾಡುತ್ತಲೇ ಇವೆ. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಬಿಕಿನಿ ತೊಟ್ಟು ಓಡಾಡಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ನಂತರ ಮೆಟ್ರೋ ಪ್ಲಾಫ್‌ಫಾರ್ಮ್‌ನಲ್ಲೇ ಪ್ರೇಮಿಗಳಿಬ್ಬರು ಲಿಪ್ ಲಾಕ್ ಮಾಡಿದ್ದ ದೃಶ್ಯ ವೈರಲ್ ಆಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಯುವತಿಯೊಬ್ಬಳು ಟ್ರಾನ್ಸ್ಪರೆಂಟ್ ಹಾಟ್ ಉಡುಗೆ ತೊಟ್ಟು ಡಾನ್ಸ್ ಮಾಡಿ ಪೇಚಿಗೆ ಸಿಲುಕಿದ್ದಳು. ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: Threadಗೆ ಸ್ಟಾರ್ ಕ್ರಿಕೆಟಿಗರಿಂದ ಫುಲ್ ಸಪೋರ್ಟ್ – ಎಲೋನ್ ಮಸ್ಕ್‌ಗೆ ಟಾಂಗ್ ಕೊಟ್ಟ ಅಶ್ವಿನ್
Advertisement
Advertisement
ನೋಡುಗರ ಕಣ್ಣುಕುಕ್ಕುವಂತೆ ಹಾಟ್ ಉಡುಗೆ ತೊಟ್ಟು ಯುವತಿಯರಿಬ್ಬರು ಬಾಲಿವುಡ್ ಸಾಂಗ್‌ಗೆ ಡಾನ್ಸ್ ಮಾಡಿ ರೀಲ್ಸ್ ಮಾಡಿದ್ದಾರೆ. ಮೆಟ್ರೋ ಕೋಚ್ ಒಳಗೆ ಪ್ರಯಾಣಿಕರು ಇದ್ದಾರೆ ಎಂಬ ಪರಿಜ್ಞಾನವೂ ಇಲ್ಲದೇ ಮೈಬಿಸಿ ಏರಿಸುವಂತೆ ಇಬ್ಬರೂ ಹಾಟ್ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ: ಅಚ್ಚರಿಯಾದ್ರೂ ಸತ್ಯ- ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆ ಕಳ್ಳತನ!
Advertisement
ಇದೇ ತಿಂಗಳ ಜುಲೈ 6ರಂದು ಹಸ್ನಾಜರೂರಿಹೈ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಯುವತಿಯರ ಡಾನ್ಸ್ ವೀಡಿಯೋ ಹಂಚಿಕೊಳ್ಳಲಾಗಿದ್ದು, 1.75 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಈಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮೊದಲು ಈ ವಿಡಿಯೋ ಕಂಡಾಗ ಆಕೆ ಡ್ಯಾನ್ಸ್ ಮೇಲೆ ಕೆಲ ನೆಟ್ಟಿಗರ ಗಮನ ಸೆಳೆದಿದ್ದು, ಆಕೆಯ ಬಟ್ಟೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಆಕೆಯ ನಡವಳಿಕೆ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ. ದೆಹಲಿ ಮೆಟ್ರೋ ರೈಲು ನಿಗಮಕ್ಕೂ (DMRC) ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ದೆಹಲಿ ಗಂಭೀರವಾಗಿ ಚೆಕಪ್ ಮಾಡಬೇಕು. ಇತ್ತೀಚೆಗೆ ದೆಹಲಿ ಮೆಟ್ರೋ ರೀಲ್ಸ್ ಮೇಕರ್ಸ್‌ಗಳಿಗೆ ಹೊಸ ಸ್ಥಳ ಆಗ್ಬಿಟ್ಟಿದೆ. ಡಿಎಂಆರ್‌ಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಯುವತಿಯೊಬ್ಬಳು ದೆಹಲಿ ಮೆಟ್ರೋದಲ್ಲಿ ಬಿಕಿನಿ ತೊಟ್ಟು ಸಂಚರಿಸಿದ್ದಾಗ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಎಚ್ಚರಿಕೆ ನೀಡಿತ್ತು. ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇದನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿತ್ತು.
Web Stories