ರಾಮನಗರ: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ನರೇಗಾ ಎಂಜಿನಿಯರ್ (Narega) ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು (Halaguru) ಸಮೀಪದ ಬಸಾಪುರ ಗೇಟ್ ಬಳಿ ನಡೆದಿದೆ.
ಮೃತಳನ್ನು ಮೂಲತಃ ಹಲಗೂರು ಸಮೀಪದ ಬಳೆಹೊನ್ನಿಗ ಗ್ರಾಮದ ನರೇಗಾ ಎಂಜಿನಿಯರ್ ಆಗಿದ್ದ ಶರಣ್ಯ ಗೌಡ (25) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ವಿಜಯೇಂದ್ರ ಯಡಿಯೂರಪ್ಪಗೆ ಹೊರಗೆ ಪೂಜ್ಯ ತಂದೆ, ಮನೇಲಿ ಮುದಿಯಾ ಅಂತಾನೆ – ಯತ್ನಾಳ್
ಶನಿವಾರ ಅವಘಡ ಸಂಭವಿಸಿದ್ದು, ಕಳೆದ ಒಂದು ವರ್ಷದಿಂದ ಕನಕಪುರ ತಾಲೂಕಿನ ಸಾತನೂರು ಪಂಚಾಯತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ಫೆ.16 ರಂದು ಶರಣ್ಯ ವಿವಾಹ ನಿಶ್ಚಯವಾಗಿತ್ತು. ಶರಣ್ಯ ಬಳೆಹೊನ್ನಿಗ ಗ್ರಾಮದಿಂದ ಹಲಗೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು