ಬೆಳಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗದಿದ್ದರೂ, ಸಿಡಿಲಿಗೆ ಬಲಿಯಾದವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತದೆ. ಬೆಳಗಾವಿಯ ಗೋಕಾಕ್ ತಾಲೂಕಿನಲ್ಲಿ ಇಂದು ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಗೋಕಾಕ್ ತಾಲೂಕಿನ ಕೆಮ್ಮನಕೂಲ ಗ್ರಾಮದ ನಿವಾಸಿ ವಾರಪ್ಪಾ ಕಟ್ಟಿಮರ (24) ಹಾಗೂ ಬಿಲಕುಂದಿ ಗ್ರಾಮದ ಶೋಭಾ ಕಳ್ಳಿಗುದ್ದಿ(50) ಮೃತ ದುರ್ದೈವಿಗಳು. ಗಾಯಗೊಂಡ ನಾಗಪ್ಪ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Advertisement
ಈ ಹಿಂದೆ ಎಲ್ಲಿ? ಎಷ್ಟು?
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ದಂಪತಿಗೆ ಸಿಡಿಲು ಬಡೆದಿದ್ದು, ಪರಿಣಾಮ ಯಲ್ಲಪ್ಪ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಆದರೆ ಅವರ ಪತ್ನಿ ವೆಂಕವ್ವ (48) ಸ್ಥಳದಲ್ಲಿಯೇ ಮೃತಪಟ್ಟಿದ್ದರು. ರಾಯಚೂರು ಜಿಲ್ಲೆ ಶಿರವಾರ ತಾಲೂಕಿನ ಬೆಡ್ಯಾವಾಡ ಗ್ರಾಮದ ನಿವಾಸಿ ನಾಗಪ್ಪ (45) ಸಿಡಿಲು ಬಡಿಗೆ ಬಲಿಯಾಗಿದ್ದಾರೆ.
Advertisement
Advertisement
ಹಾವೇರಿ ಜಿಲ್ಲೆಯಲ್ಲಿ ಒಂದು ವಾರದಲ್ಲಿಯೇ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿಯೂ ತಲಾ ಒಬ್ಬರಂತೆ ಒಟ್ಟು ಇಬ್ಬರು ಬಲಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಈ ವರ್ಷದಲ್ಲಿ ಸಿದ್ದಾಪುರ, ಮುಂಡಗೋಡು, ಕುಮಟಾ, ಜೊಯಿತಾ ತಾಲೂಕುಗಳಲ್ಲಿ ಒಟ್ಟು ನಾಲ್ಕು ಜನ ಸಿಡಿಲು ಅಪ್ಪಳಿಸಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 15 ದಿಗಳಲ್ಲಿ ಇಬ್ಬರು ವ್ಯಕ್ತಿಗಳು ಸೇರಿದಂತೆ, 95 ಕುರಿ ಆರು ಟಗರು ಸಿಡಿಲಿಗೆ ಬಲಿಯಾಗಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv