ದಾವಣಗೆರೆ: ನಿಧಿ ಆಸೆಗಾಗಿ ವಾಮಾಚಾರ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಜಗಳೂರು ತಾಲೂಕಿನ ದೊಣ್ಣೆಹಳ್ಳಿಯಲ್ಲಿ ನಡೆದಿದೆ.
ಮೌನಾಚಾರಿ ಹಾಗೂ ಭಾಷಾ ವಾಮಾಚಾರ ಮಾಡುತ್ತಿದ್ದ ಆರೋಪಿಗಳು. ವಾಮಾಚಾರ ವಿಷಯ ತಿಳಿಯುತ್ತಿದ್ದಂತೆ ಮೌನಾಚಾರಿ ಹಾಗೂ ಭಾಷಾ ಎನ್ನುವ ವ್ಯಕ್ತಿಯನ್ನು ಅಕ್ಕಪಕ್ಕದ ಮನೆಯವರು ಹಿಡಿದಿದ್ದಾರೆ. ಆದರೆ ಇವರ ಜೊತೆಗಿದ್ದ ಮತ್ತಿಬ್ಬರು ಆರೋಪಿಗಳು ಸ್ಥಳೀಯರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
Advertisement
ಮುಂಜಾನೆ ಯಾರು ಇಲ್ಲದ ಸಮಯ ನೋಡಿ, ಮೌನಾಚಾರಿ, ಭಾಷಾ ಹಾಗೂ ಪರಾರಿಯಾದ ಇಬ್ಬರು ಸೇರಿ ಕೃತ್ಯ ಎಸಗಿದ್ದಾರೆ. ಮನೆಯೊಂದರ ಮುಂಭಾಗದಲ್ಲಿ ಗುಂಡಿ ತೆಗೆದು, ಕೋಳಿ, ಸಲಿಕೆ ಹಾಗೂ ಹಾರಿಗೆ ಪೂಜೆ ಮಾಡಿ, ಕೋಳಿ ಬಲಿಕೊಟ್ಟಿದ್ದರು. ಅಕ್ಕ ಪಕ್ಕದ ಮನೆಯವರಿಗೆ ಶಂಕೆ ವ್ಯಕ್ತವಾಗಿ ಸ್ಥಳಕ್ಕೆ ಬಂದಿದ್ದು, ಮೌನಾಚಾರಿ ಹಾಗೂ ಭಾಷಾರನ್ನು ಹಿಡಿತು ಥಳಿಸಿದಾಗ ಸತ್ಯ ಬಾಯಿಬಿಟ್ಟಿದ್ದಾರೆ. ಇವರ ಜೊತೆಗಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ.
Advertisement
ಮೌನಾಚಾರಿ ಹಾಗೂ ಭಾಷಾರನ್ನು ಸ್ಥಳೀಯರು ಜಗಳೂರು ಪೊಲೀಸರಿಗೆ ಒಪ್ಪಿಸಿದ್ದು, ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.