ದಿಸ್ಪುರ್: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI) ಅಸ್ಸಾಂ (Assam) ಘಟಕದ ಇಬ್ಬರು ಉನ್ನತ ನಾಯಕರನ್ನು ಬಾರ್ಪೇಟಾದಲ್ಲಿ (Barpeta) ಬಂಧಿಸಲಾಗಿದೆ. ಪಿಎಫ್‍ಐನ ರಾಜ್ಯ ಅಧ್ಯಕ್ಷ ಅಬು ಸಮಾ ಅಹ್ಮದ್ ಹಾಗೂ ರಾಜ್ಯ ಕಾರ್ಯದರ್ಶಿ ಜಾಕಿರ್ ಹುಸೇನ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಸಂಘಟನೆಯ ನಾಯಕ ಸಾಹಿದುಲ್ ಇಸ್ಲಾಂನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂ. ನಾಲ್ಕು ಮೊಬೈಲ್ ಫೋನ್‍ಗಳು ಮತ್ತು ಕೆಲವು ಕರಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಹುಚ್ಚಾಟ – ತುರ್ತು ನಿರ್ಗಮನ ದ್ವಾರ ತೆಗೆಯಲು ವ್ಯಕ್ತಿ ಪ್ರಯತ್ನ
Advertisement
Advertisement
ಕೇಂದ್ರ ಸರ್ಕಾರ ಕಳೆದ 2022ರ ಸೆಪ್ಟೆಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪಿಎಫ್‍ಐನ್ನು ನಿಷೇಧಿಸಿತ್ತು. ಮತ್ತು ಅದರ ಅಂಗಸಂಸ್ಥೆಗಳು ದೇಶದ ಸಮಗ್ರತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವ ಕೆಲಸಗಳಲ್ಲಿ ತೊಡಗಿವೆ ಎಂದು ಗೃಹ ಸಚಿವಾಲಯ (Home Ministry) ಹೇಳಿತ್ತು.
Advertisement
ಅಲ್ಲದೇ ಜನರಲ್ಲಿ ಭಯ ಹುಟ್ಟಿಸಲು ಪಿಎಫ್‍ಐ ಸದಸ್ಯರು ಈ ಹಿಂದೆ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು. ಅದರ ಕಾರ್ಯಕರ್ತರು ಹಲವಾರು ಕ್ರೂರ ಕೊಲೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಸಚಿವಾಲಯ ಹೇಳಿಕೊಂಡಿತ್ತು. ಇದನ್ನೂ ಓದಿ: ಎಂಗೇಜ್ಮೆಂಟ್ ಆಗಿದ್ದವಳಿಂದಲೇ ಹತ್ಯೆಗೆ ಯತ್ನ- ಪ್ರಾಣಾಪಾಯದಿಂದ ಯುವಕ ಪಾರು