ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ವಿದ್ಯಾರ್ಥಿಗಳನ್ನು ಡಾರ್ಗೆಟ್ ಮಾಡಿಕೊಂಡು ಹೆರಾಯಿನ್, ಅಫೀಮುಗಳನ್ನು ಮಾರಾಟ ಮಾಡುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಮಾದಕವಸ್ತುಗಳ ದಂಧೆಕೋರರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಾಗಿದ್ದು, ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿರುವ ಹಿನ್ನೆಲೆ ಪಕ್ಕದ ಮಂಡ್ಯ ಜಿಲ್ಲೆಯತ್ತ ಮಾದಕವಸ್ತುಗಳ ದಂಧೆಕೋರರು ಮುಖ ಮಾಡಿದ್ದಾರೆ. ಇಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಹೆರಾಯಿನ್, ಅಫೀಮುಗಳನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಮಂಡ್ಯದ ಯುವ ಪೀಳಿಗೆ ಮಾದಕವಸ್ತುಗಳ ವ್ಯಸನಿಗಳಾಗುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಎಸ್‍ಪಿ ಕಚೇರಿಗೆ ಹಾಗೂ ಪೊಲೀಸ್ ಠಾಣೆಗಳಿಗೆ ಪದೇ ಪದೇ ದೂರುಗಳು ಬರುತ್ತಿದ್ದವು. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ
Advertisement
Advertisement
ಈ ಹಿನ್ನೆಲೆ ಮಂಡ್ಯ ಪೊಲೀಸರು ಹೆರಾಯಿನ್, ಅಫೀಮು ಮಾರಾಟ ಮಾಡುವವರನ್ನು ಬಂಧಿಸಲು ಬಲೆ ಬೀಸಿದ್ದರು. ಇತ್ತೀಚೆಗೆ ಮಂಡ್ಯದ ಚರ್ಚ್ ರಸ್ತೆ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಕಂಡ ಪೊಲೀಸರು ಆ ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಈ ಇಬ್ಬರು ಹೆರಾಯಿನ್ ಹಾಗೂ ಅಫೀಮು ಪೆಡ್ಲರ್‌ಗಳು ಎಂದು ತಿಳಿದಿದೆ.
Advertisement
Advertisement
ಇನ್ನೂ ತೀವ್ರತರವಾದ ವಿಚಾರಣೆ ಮಾಡಿದಾಗ, ನಾವು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಹೆರಾಯಿನ್ ಹಾಗೂ ಅಫೀಮು ಅನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಬಾಯಿ ಬಿಟ್ಟಿದ್ದಾರೆ. ಈ ಬಂಧಿತರಿಂದ 6 ಲಕ್ಷ ಮೌಲ್ಯದ ಹೆರಾಯಿನ್, 75 ಸಾವಿರ ಮೌಲ್ಯದ ಅಫೀಮುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಈ ಮಾದಕವಸ್ತುಗಳ ಮಾರಾಟಗಾರರು ಇನ್ನೂ ಇರಬಹುದಾದ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅವರ ಸೆರೆಗೂ ಸಹ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ