ಮೈಸೂರಿನಲ್ಲಿ ಒಂದೇ ದಿನ 2 ಸರಕಳ್ಳತನ – ಆರೋಪಿಗಳು ಪರಾರಿ

Public TV
1 Min Read
police 1

ಮೈಸೂರು : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯರ ಸರಕಳ್ಳತನ ಮಾಡಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

ಮೊದಲಿಗೆ ಕಳ್ಳರು ಚಾಮರಾಜಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಉಮಾದೇವಿ ಎಂಬವರ ಕುತ್ತಿಗೆಯಲ್ಲಿದ್ದ 70 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. 

POLICE JEEP

ನಂತರ ಇದೇ ಸರಕಳ್ಳರು ವಿ.ವಿ.ಪುರಂ ಸಮೀಪದ ಹೈವೇ ಹೋಟೆಲ್ ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೀನಾಕ್ಷಮ್ಮ ಎಂಬವರ ಕುತ್ತಿಗೆಯಿಂದ 70 ಗ್ರಾಂ ಚಿನ್ನದ ಸರವನ್ನು ಎಳೆದಿದ್ದಾರೆ. ಇದನ್ನೂ ಓದಿ: ಕೊಡಗಿನ ಗ್ರಾಮವೊಂದರಲ್ಲಿ ಪುರಾತನ ಈಶ್ವರ ಕೆತ್ತನೆ ಕಲ್ಲುಗಳು ಪತ್ತೆ

hbl hubballi police jeep

ಎರಡು ಕಡೆಗೂ ಸ್ಕೂಟರ್‍ನಿಂದ ಬಂದ ಇಬ್ಬರು ಸರಗಳ್ಳರಿಂದ ಈ ಕೃತ್ಯ ನಡೆದಿದೆ. ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಕಾರ್ಯಾಚರಣೆ ಮಾಡುವಾಗ ಯಾವುದೇ ರೀತಿಯ ಮಾಹಿತಿ ಲಭ್ಯವಾಗಲಿಲ್ಲ. ಈ ಕುರಿತು ಲಕ್ಷ್ಮೀ ಪುರಂ ಮತ್ತು ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article