ವಿದ್ಯಾರ್ಥಿಗಳ ಪೋಷಕರೊಂದಿಗೆ ಅನುಚಿತ ವರ್ತನೆ, ಹಣ ದುರುಪಯೋಗ – ಇಬ್ಬರು ಶಿಕ್ಷಕರು ಅಮಾನತು

Public TV
0 Min Read
teachers suspended

ಚಾಮರಾಜನಗರ: ವಿದ್ಯಾರ್ಥಿಗಳ ಪೋಷಕರೊಂದಿಗೆ ಅನುಚಿತವಾಗಿ ವರ್ತನೆ ಹಾಗೂ ಹಣ ದುರುಪಯೋಗ ಆರೋಪದ ಮೇಲೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶಿಕ್ಷಕ ವೆಂಕಟನಾರಾಯಣ್ ಹಾಗೂ ಹನೂರು ತಾಲೂಕಿನ ಕುರುಬರ ದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಕುಮಾರ್ ಅಮಾನತಾವರು.

ವಿದ್ಯಾರ್ಥಿಯ ತಾಯಿಯ ಜೊತೆ ಅಸಭ್ಯ ವರ್ತನೆ ಹಿನ್ನೆಲೆ ಶಿಕ್ಷಕ ವೆಂಕಟ ನಾರಾಯಣ್ ಅಮಾನತುಗೊಂಡಿದ್ದಾರೆ. ಶಾಲೆಯ ಅಡುಗೆ ಮನೆ ಕಟ್ಟಡದ ಹಣ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಮುಖ್ಯ ಶಿಕ್ಷಕ ಮಹೇಶ್ ಕುಮಾರ್ ಅಮಾನತಾಗಿದ್ದಾರೆ.

ಶಾಲೆಯ ಅಡುಗೆ ಮನೆ ಕಟ್ಟಡ ನಿರ್ಮಾಣದ ಹಣ ದುರುಪಯೋಗ ಹಿನ್ನೆಲೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Share This Article