ಲಕ್ನೋ: ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಇಬ್ಬರು ಉಗ್ರರನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಜಮ್ಮು-ಕಾಶ್ಮೀರದ ಕುಲ್ಗಾಮ್ ನಿವಾಸಿ ಶಹಾನವಾಜ್ ಅಹ್ಮದ್ ಮತ್ತು ಪುಲ್ವಾಮಾದ ಅಕಿಬ್ ಅಹ್ಮದ್ ಮಲೀಕ್ ಬಂಧಿತ ಉಗ್ರರು. ಶಹಾನವಾಜ್ ಅಹ್ಮದ್ ಗ್ರೆನೇಡ್ ಸ್ಫೋಟದಲ್ಲಿ ಪರಿಣತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
UP DGP OP Singh: Yesterday after inputs two suspected terrorists were caught from Saharanpur by our ATS wing. They are linked to JeM and both are from Kashmir. Shahnawaz is from Kulgam and Aqib is from Pulwama. Two weapons and live cartridges seized. pic.twitter.com/jXXJ7cxQFo
— ANI UP/Uttarakhand (@ANINewsUP) February 22, 2019
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಅವರು, ಈ ಇಬ್ಬರು ಉಗ್ರರು ಭಯೋತ್ಪಾದನ ನಿಗ್ರಹ ದಳವು (ಎಟಿಎಸ್) ದಿಯೋಬಂದ್ ಹಾಗೂ ಶಹರಾನ್ಪೂರದಲ್ಲಿ ಬಂಧಿಸಿದೆ. ಆರೋಪಿಗಳ ಬಳಿ ಇದ್ದ ಹ್ಯಾಂಡ್‍ಗನ್ ಹಾಗೂ ಬುಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement
ಬಂಧಿತ ಶಾನವಾಜ್ ಪುಲ್ವಾಮಾ ದಾಳಿಯ ಹೊಣೆ ಹೊತ್ತಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಹೊಸದಾಗಿ ನೇಮಕಗೊಂಡಿದ್ದಾನೆ. ಪುಲ್ವಾಮಾ ದಾಳಿಗೂ ಮುನ್ನ ಹಾಗೂ ನಂತರ ಬಂಧಿತ ಉಗ್ರರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ ಎಂದು ಹೇಳುವುದು ಕಷ್ಟ. ಉಗ್ರ ಸಂಘಟನೆಯ ಜೊತೆ ನಂಟು ಹೊಂದಿರುವುದಕ್ಕೆ ನಮಗೆ ಹಲವಾರು ಸಾಕ್ಷ್ಯಗಳು ಸಿಕ್ಕಿವೆ. ಆದರೆ ಅವುಗಳನ್ನು ಈಗ ಬಹಿರಂಗ ಪಡಿಸುವುದಿಲ್ಲ. ಈ ಸಂಬಂಧ ತನಿಖೆ ಆರಂಭವಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಹೇಳಿದ್ದಾರೆ.
Advertisement
UP DGP OP Singh: Of the two Shahnawaz is said to be a grenade expert. We will seek transit remand and investigate when they came here from Kashmir and who is funding them and what was their target. We are in touch with J&K Police https://t.co/I4HzNBmk9b
— ANI UP/Uttarakhand (@ANINewsUP) February 22, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv