ಬೆಂಗಳೂರು: ರೈತರ ಪರ ಯಾರೇ ಹೋರಾಟ ಮಾಡಿದರು ನಮ್ಮ ಬೆಂಬಲ ಇರಲಿದೆ, ಎಂದು ವಕ್ಫ್ ವಿಚಾರವಾಗಿ ಬಿಜೆಪಿ (BJP) ರೆಬಲ್ ಟೀಂ ಮಾಡ್ತಿರೋ ವಕ್ಫ್ ಅಭಿಯಾನದ ವಿಚಾರಕ್ಕೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B Y Vijayendra) ಹೇಳಿಕೆ ನೀಡಿದ್ದಾರೆ.
ಯತ್ನಾಳ್ ಟೀಂ ವಕ್ಫ್ ಅಭಿಯಾನ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಳೆದೊಂದು ವಾರದಿಂದ ವಕ್ಫ್ ಹೋರಾಟದ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ.ಬಿಜೆಪಿ ಎರಡು ಹಂತದಲ್ಲಿ ಹೋರಾಟ ಮಾಡಲು ನಿರ್ಧಾರ ಆಗಿದೆ. ಬೆಳಗಾವಿ ಅಧಿವೇಶನದಲ್ಲಿ ರೈತರನ್ನ ಸೇರಿಸಿ ದೊಡ್ಡ ಪ್ರತಿಭಟನೆ ಮಾಡ್ತೀವಿ. ಎರಡು ಹಂತದ ಹೋರಾಟಕ್ಕೆ 3 ತಂಡಗಳು ರಚನೆ ಆಗಿವೆ ಎಂದು ತಿಳಿಸಿದರು. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಜನ್ಮವಿತ್ತ ನವಜಾತ ಶಿಶು ಹತ್ಯೆ ಕೇಸ್ – ಮೂವರು ಆರೋಪಿಗಳು ಅಂದರ್
ಯತ್ನಾಳ್ ಗುಂಪು ಬಿಜೆಪಿ ಗುಂಪು ಎಂದು ಗೊಂದಲ ಆಗೋದಿಲ್ಲವಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರೈತರ ಪರ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ಹೋರಾಟ ಮಾಡೋಕೆ ಯಾಕೆ ಮುಜುಗರ ಪಡಬೇಕು. ವಕ್ಫ್ ವಿಚಾರದಲ್ಲಿ ಬಿಜೆಪಿ ಸ್ಪಷ್ಟವಾಗಿದೆ. ಮಠಗಳು, ಮಾನ್ಯಗಳ ಜಮೀನು, ದೇವಾಲಯದ ಜಮೀನು ಕಿತ್ತುಕೊಳ್ಳುತ್ತಿರುವುದರಿಂದ ರೈತರು ಆತಂಕದಲ್ಲಿ ಇದ್ದಾರೆ. ಹೀಗಾಗಿ ಸರ್ಕಾರ ಸ್ಪಷ್ಟ ಉತ್ತರ ಕೊಡೋವರೆಗೂ ನಾವು ಹೋರಾಟ ಮಾಡ್ತೀವಿ ಎಂದು ಹೇಳಿದರು. ಇದನ್ನೂ ಓದಿ: ಶಾಸಕರ ಖರೀದಿಗೆ 2,000 ಕೋಟಿ ಬೇಕು, ಎಸ್‍ಐಟಿಗೆ ಹೇಳಿ ಸಿಎಂ ಸೀಜ್ ಮಾಡಿಸಲಿ: ಅಪ್ಪಚ್ಚು ರಂಜನ್ ವ್ಯಂಗ್ಯ
ಹೋರಾಟವನ್ನ ಬಿಜೆಪಿ ಗಟ್ಟಿಯಾಗಿ ತೆಗೆದುಕೊಂಡಿದೆ. ನಮ್ಮ ಹೋರಾಟದಲ್ಲಿ ಯತ್ನಾಳ್, ಜಾರಕಿಹೋಳಿ, ಎಲ್ಲಾ ಶಾಸಕರು, ಸಂಸದರು ಇರುತ್ತಾರೆ. ರೈತರ ಪರ ಯಾರೇ ಹೋರಾಟ ಮಾಡಿದ್ರು ನನ್ನ ಸಂಪೂರ್ಣ ಬೆಂಬಲ ಇದೆ. ರೈತರ ಪರವಾಗಿ ಧ್ವನಿ ಎತ್ತಿದ ಪಕ್ಷ ಬಿಜೆಪಿ. ಯಡಿಯೂರಪ್ಪ ಅವರು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಆಡಳಿತ ಮಾಡಿದ್ದಾರೆ. ರೈತರ ಪರ ಬಿಜೆಪಿ ಹಿಂದೆ ಬಿಳೋದಿಲ್ಲ, ಯಾವಾಗಲು ಇರುತ್ತದೆ. ನಮ್ಮ ಹೋರಾಟ ಹೇಗೆ ಇರಲಿದೆ ಎಂದು ಈಗಾಗಲೇ ಹಿರಿಯರ ತಂಡ ರಚನೆ ಆಗಿದೆ. ಒಂದೆರಡು ದಿನಗಳಲ್ಲಿ ಹೋರಾಟದ ಬಗ್ಗೆ ತಿಳಿಸುತ್ತೇವೆ ಎಂದರು. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಕುರಿತು ಪ್ರಚೋದನಕಾರಿ ಹೇಳಿಕೆ – ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್