ಬೆಂಕಿ ಹೊತ್ತಿಕೊಂಡು ಎರಡು ಅಂಗಡಿಗಳು ಭಸ್ಮ

Public TV
1 Min Read
SHOP BURNOUT 4

ಬೆಂಗಳೂರು: ಗ್ಯಾರೇಜ್ (Garej) ಅಂಗಡಿಗೆ ಹೊತ್ತಿಕೊಂಡ ಬೆಂಕಿ ಪಕ್ಕದ ಅಂಗಡಿಗೂ ಆವರಿಸಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ತಾಲೂಕಿನ ಜಿಗಣಿಯ ಎಪಿಸಿ ವೃತ್ತದಲ್ಲಿ ನಡೆದಿದೆ.

SHOP BURNOUT 1

ಗೋಪಿ ಎಂಬವರಿಗೆ ಸೇರಿದ ಗ್ಯಾರೇಜ್‌ನಲ್ಲಿ ಸೋಮವಾರ ಮಧ್ಯಾಹ್ನ 2:30ರ ಸಮಯಕ್ಕೆ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಗ್ಯಾರೇಜ್‌ನಲ್ಲಿದ್ದ ಟಯರ್ ಹಾಗೂ ಆಯಿಲ್‌ಗೆ ಬೆಂಕಿ ಆವರಿಸಿಕೊಂಡಿದ್ದು, ಇದರಿಂದ ಪಕ್ಕದ ಸ್ಟಿಕ್ಕರ್ ಡಿಸೈನ್ ಅಂಗಡಿಗೂ ಕೂಡ ಬೆಂಕಿ ಆವರಿಸಿಕೊಂಡಿದೆ. ಆಯಿಲ್‌ಗೆ ಹತ್ತಿಕೊಂಡಿದ್ದ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನೇ ಆವರಿಸಿದ್ದು, ಎರಡೂ ಅಂಗಡಿಯಲ್ಲಿರುವ ಬಹುತೇಕ ವಸ್ತುಗಳು ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: 4 ಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ – ಸಾವಿಗೆ ಹೆದರಿ ಹಿರಿಯ ಮಗಳೊಂದಿಗೆ ಮೇಲೆ ಬಂದ್ಲು

SHOP BURNOUT 5

ಗ್ಯಾರೇಜ್‌ನ ಆಯಿಲ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಘಟನೆಯಿಂದಾಗಿ ಕೆಲ ಹೊತ್ತು ಅಕ್ಕಪಕ್ಕದ ಅಂಗಡಿ ಹಾಗೂ ಕಟ್ಟಡದಲ್ಲಿದ್ದ ಮನೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗಬೇಕಾಯಿತು. ಜನನಿ ಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದರಿಂದ ಬಿಸಿಲಿನ ಝಳಕ್ಕೆ ಬೆಂಕಿಯ ಆರ್ಭಟ ಹೆಚ್ಚಾಗಿತ್ತು. ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನಗಳು (Fire Department) ಬೆಂಕಿಯನ್ನು ಹತೋಟಿಗೆ ತಂದಿದ್ದು, ಅಕ್ಕಪಕ್ಕದ ಅಂಗಡಿ ಹಾಗೂ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಘಟನೆ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಾಂಸ ತರದ್ದಕ್ಕೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ

Share This Article