ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಸಂದೇಶ್‍ಖಾಲಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಮ್ಮ ಮೇಲೆ ಟಿಎಂಸಿ (TMC) ಮುಖಂಡರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ಮೂವರು ಮಹಿಳೆಯರ ಪೈಕಿ ಇಬ್ಬರು ಯೂಟರ್ನ್ ತೆಗೆದುಕೊಂಡಿದ್ದಾರೆ.
ತಮ್ಮ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದಿಲ್ಲ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಬಿಳಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ. ನಾನೆಂದಿಗೂ ರಾತ್ರಿ ಹೊತ್ತಲ್ಲಿ ಪಾರ್ಟಿ ಆಫೀಸ್‍ಗೆ ಹೋಗಿಲ್ಲ. ನನಗೆ ಲೈಂಗಿಕ ಕಿರುಕುಳವನ್ನು ಯಾರು ನೀಡಿಲ್ಲ ಎಂದಿದ್ದಾರೆ. ತಮ್ಮಿಂದ ತಪ್ಪಾಗಿದೆ ಎಂಬುದನ್ನು ಅರಿತು ಈಗ ಕೇಸ್ ವಾಪಸ್ ಪಡೆಯುತ್ತಿದ್ದೇನೆ. ಈ ವಿಚಾರ ತಿಳಿದ ಬಿಜೆಪಿಯ (BJP) ಕೆಲ ನಾಯಕರು ತಮ್ಮನ್ನು ಬೆದರಿಸುತ್ತಿದ್ದಾರೆ. ತಮಗೆ ರಕ್ಷಣೆ ಬೇಕು ಎಂದು ಕೋರಿ ಪೊಲೀಸರಿಗೆ ಮತ್ತೊಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾಗ್ರಾಂನಲ್ಲಿ ಮತದಾನದ ಲೈವ್ – ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ
- Advertisement
- Advertisement
ಇತ್ತ ಮಹಿಳೆಯರ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಮಹಿಳೆಯರ ಯೂಟರ್ನ್ ಹೇಳಿಕೆಯನ್ನು ಖಂಡಿಸಿದೆ. ಇದರಲ್ಲಿ ಟಿಎಂಸಿ ಷಡ್ಯಂತ್ರವಿದೆ ಎಂದು ಬಿಜೆಪಿ ಕಿಡಿಕಾರಿದೆ. ಈ ಬೆನ್ನಲ್ಲೇ ಸಂದೇಶಖಲಿ ಪ್ರಕರಣ ಸಂಬಂಧ ಟಿಎಂಸಿ ಚುನಾವಣಾ ಆಯೋಗದ ಮೊರೆ ಹೋಗಿದೆ. ಇದು ಬಿಜೆಪಿ ರೂಪಿಸಿದ್ದ ಚುನಾವಣಾ ವ್ಯೂಹ, ಸುವೆಂದು ಸೇರಿ ಇತರರ ವಿರುದ್ಧ ಕ್ರಮ ತಗೋಬೇಕು ಎಂದು ಆಗ್ರಹಿಸಿದೆ.