ಭೋಪಾಲ್: ವೇಗವಾಗಿ ಬಂದ ರೈಲು (Train) ಡಿಕ್ಕಿ ಹೊಡೆದು ರೈಲ್ವೇ ಸಂರಕ್ಷಣಾ ಪಡೆಯ (RPF) ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಮೊರೆನಾ (Morena) ಜಿಲ್ಲೆಯಲ್ಲಿ ನಡೆದಿದೆ.
ಮೊರೆನಾದಿಂದ 7 ಕಿಮೀ ದೂರದಲ್ಲಿರುವ ಸಾಂಕ್ ರೈಲು ನಿಲ್ದಾಣದಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಹೆಡ್ ಕಾನ್‌ಸ್ಟೇಬಲ್‌ಗಳಾದ ಅಶೋಕ್ ಕುಮಾರ್ (56) ಮತ್ತು ನವರಾಜ್ ಸಿಂಗ್ (40) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರಾಮದ ಯುವಕನೊಂದಿಗೆ ಪ್ರೀತಿ – ಮಗಳನ್ನೇ ಕೊಚ್ಚಿ ಕೊಂದ ತಂದೆ
Advertisement
Advertisement
ಆರ್‌ಪಿಎಫ್ ಪೊಲೀಸರು ಸ್ಥಳದಲ್ಲಿ ನಿಲ್ಲಿಸಿದ್ದ ಗ್ವಾಲಿಯರ್-ಆಗ್ರಾ ಪ್ಯಾಸೆಂಜರ್ ರೈಲನ್ನು ಪರಿಶೀಲಿಸುತ್ತಿದ್ದು, ಅವರಿಬ್ಬರೂ ಮಧ್ಯದ ಹಳಿಯಲ್ಲಿದ್ದರು. ಈ ವೇಳೆ ದೆಹಲಿಯಿಂದ ಬರುತ್ತಿದ್ದ ದುರೊಂತೋ ಎಕ್ಸ್ಪ್ರೆಸ್ ರೈಲು ವೇಗವಾಗಿ ಹಾದು ಹೋಗಿದೆ. ಇದರಿಂದ ರೈಲು ಅಧಿಕಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ಮೊರೆನಾ ಆರ್‌ಪಿಎಫ್ ಪೊಲೀಸ್ ಠಾಣೆಯ ಉಸ್ತುವಾರಿ ಹರಿಕಿಶನ್ ಮೀನಾ ತಿಳಿಸಿದ್ದಾರೆ. ಇದನ್ನೂ ಓದಿ: 2,500 ರೂ. ವಾಪಸ್ ಕೊಡದಿದ್ದಕ್ಕೆ ಯುವಕನ ಕೈಯನ್ನೆ ಕತ್ತರಿಸಿದ್ರು
Advertisement
ಇನ್ನೊಂದು ಬದಿಯ ಹಳಿಯಲ್ಲಿ ಗೂಡ್ಸ್ ರೈಲು ನಿಂತಿದ್ದರಿಂದ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಓಡಲು ಸಾಧ್ಯವಾಗಲಿಲ್ಲ. ಹೀಗಾಗಿ ದುರಂತ ಸಂಭವಿಸಿದೆ. ಇಬ್ಬರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.