ರಾಮಮಂದಿರದ ಮಂಡಲೋತ್ಸವ ಪೂಜೆಗೆ ರಾಯಚೂರಿನ ವೈದಿಕರಿಬ್ಬರು ಆಯ್ಕೆ

Public TV
1 Min Read
RAICHUR PUROHITARU

ರಾಯಚೂರು: ಇಡೀ ವಿಶ್ವವೇ ಎದುರು ನೋಡುತ್ತಿರುವ ಅಯೋಧ್ಯೆ (Ayodhya) ರಾಮಮಂದಿರದ (Ram Mandir) ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ (Prana Pratishtha) ಜ.22ರಂದು ನಡೆಸಲು ಸಕಲ ಸಿದ್ಧತೆಗಳಾಗಿವೆ. ಪ್ರತಿಷ್ಠಾಪನೆ ಬಳಿಕ 48 ದಿನಗಳ ಕಾಲ ವೀರಶೈವಾಗಮನ ಪದ್ಧತಿಯಲ್ಲಿ ಮಂಡಲೋತ್ಸವ ನಡೆಯಲಿದೆ. ಮಂಡಲೋತ್ಸವ ಪೂಜೆಗೆ ರಾಜ್ಯದ ಹಲವು ವೈದಿಕ ಪಂಡಿತರು ಆಯ್ಕೆಯಾಗಿದ್ದು ರಾಯಚೂರಿನಿಂದ (Raichur) ಇಬ್ಬರು ಯುವ ಅರ್ಚಕರು ಆಯ್ಕೆಯಾಗಿದ್ದಾರೆ.

RAICHUR PUROHITARU 1

ಕೊಪ್ಪಳದ ಕಾರಟಗಿಯಲ್ಲಿ ಅರ್ಚಕರಾಗಿರುವ ಲಿಂಗಸುಗೂರು ತಾಲೂಕಿನ ಗುರಗುಂಟದ ವೇದಮೂರ್ತಿ ಆದಯ್ಯ ಸ್ವಾಮಿ ಸಾಲಿಮಠ ಹಾಗೂ ಮಸ್ಕಿ ತಾಲೂಕಿನ ಹಸಮಕಲ್‍ನ ವೇದಮೂರ್ತಿ ಶ್ರೀಧರ ಸ್ವಾಮಿ ಹಿರೇಮಠ ಅವರು, ಮಂಡಲೋತ್ಸವ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಮಹಾಪೂಜೆಗೆ ಆಯ್ಕೆಯಾಗಿರುವುದಕ್ಕೆ ವೈದಿಕ ಪಂಡಿತರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾಭೈರಬ್ ದೇವಾಲಯದ ಸ್ವಚ್ಛತಾ ಅಭಿಯಾನದಲ್ಲಿ ಅಮಿತ್ ಶಾ ಭಾಗಿ

ಆನ್ ಲೈನ್ ಮೂಲಕ ವೈದಿಕ ಸೇವೆಗಾಗಿ ರಾಮ ಜನ್ಮಭೂಮಿ ಟ್ರಸ್ಟ್ ಋಗ್ವೇದ, ವೇದಾಧ್ಯಯನ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವರಿಗಾಗಿ ಅರ್ಜಿ ಕರೆದಿತ್ತು. ಸಂದರ್ಶನದಲ್ಲಿ ಆಯ್ಕೆಯಾಗಿರುವ ಜಿಲ್ಲೆಯ ವೈದಿಕ ಪಂಡಿತರು ಶ್ರೀರಾಮನ ಸಿಂಹಾಸನಾರೋಹಣಕ್ಕಾಗಿ ಯಾಗದ ವಿಧಿಗಳನ್ನು ನಡೆಸುವ ಹಾಗೂ ಮಂಡಲ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

Share This Article