ಬೆಂಗಳೂರು: ಬಹು ಮಹಡಿ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ (Water Tank) ಹಾಗೂ ಗೋಡೆ ಕುಸಿದು ಬಿದ್ದು ಅಮಾಯಕರಿಬ್ಬರು ಸಾವನ್ನಪ್ಪಿರುವ ಘಟನೆ ಶಿವಾಜಿ ನಗರ (Shivajinagar) ಬಸ್ ನಿಲ್ದಾಣದಲ್ಲಿ (Bus Stand) ನಡೆದಿದೆ.
ಶಿವಾಜಿನಗರ ಬಸ್ ನಿಲ್ದಾಣದಲ್ಲಿರುವ ಓಕ್ ಫರ್ನೀಚರ್ ಕಟ್ಟಡದ ಮೇಲೆ 5 ಸಾವಿರ ಲೀಟರ್‌ನ ಎರಡು ನೀರಿನ ಟ್ಯಾಂಕ್ ಇರಿಸಿಲಾಗಿತ್ತು. ಬುಧವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ನೀರಿನ ಟ್ಯಾಂಕ್ ಇರಿಸಿದ್ದ ಗೋಡೆ (Wall) ಕುಸಿದು ಬಿದ್ದ ಪರಿಣಾಮ ನೀರಿನ ಟ್ಯಾಂಕ್‌ಗಳು ನಾಲ್ಕನೇ ಮಹಡಿಯಿಂದ ಕೆಳಗಡೆ ಬಿದ್ದಿವೆ. ಇದನ್ನೂ ಓದಿ: ಜಾಮೀನಿಗಾಗಿ ವಕೀಲನ ಕಿಡ್ನಾಪ್ – ರಾತ್ರಿ ಇಡೀ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ರೌಡಿಶೀಟರ್
Advertisement
Advertisement
ಟ್ಯಾಂಕ್ ಹಾಗೂ ಗೋಡೆ ಬಿದ್ದ ರಭಸಕ್ಕೆ ಕಟ್ಟಡದ ಕೆಳಗಡೆ ಇದ್ದ ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಅದೇ ಸಮಯಕ್ಕೆ ಎಗ್ ರೈಸ್ ಸವಿಯಲು ಬಂದಿದ್ದ ಮೂವರ ಮೇಲೆ ಟ್ಯಾಂಕ್ ಹಾಗೂ ಗೋಡೆ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟಿರುವ ಇಬ್ಬರಲ್ಲಿ ಒಬ್ಬರು ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಮತ್ತೊಬ್ಬರು ಗ್ರಾಹಕ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಬೆಂಗಳೂರು, ಹೈದರಾಬಾದ್ ನಡುವೆ ಸಂಚಾರ
Advertisement
ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯರ ಸಹಾಯದಿಂದ ಪೊಲೀಸರು ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಕಟ್ಟಡದ ಮಾಲೀಕ ಟ್ಯಾಂಕ್ ಇಡಲು ಅವೈಜ್ಞಾನಿಕವಾಗಿ ಕಟ್ಟಡ ಕಟ್ಟಿದ್ದರ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಕಂಡು ಬಂದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ
Advertisement
ಸದ್ಯ ನಿರ್ಲಕ್ಷ್ಯ ಆರೋಪದಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಟ್ಟಡದ ಮಾಲೀಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಂಪಿ ಬೀದಿ ಬದಿ ವ್ಯಾಪಾರಿಯ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್
Web Stories