ಕೊಪ್ಪಳ: ಬೈಕಿನಲ್ಲಿ ಹೋಗುತ್ತಿದ್ದಾಗ ವೇಳೆ ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಜಬ್ಬಲಗುಡ್ಡ ಬಳಿ ನಡೆದಿದೆ.
ಕೊಪ್ಪಳ ತಾಲೂಕಿನ ಅಲ್ಲಾನಗರ ನಿವಾಸಿ 28 ವರ್ಷದ ರಮೇಶ್ ಡೋಲಿ ಹಾಗೂ ಗುಡದಹಳ್ಳಿ ನಿವಾಸಿ 50 ವರ್ಷದ ರತ್ನಮ್ಮ ಮೃತ ದುರ್ದೈವಿಗಳು. ಆಯುರ್ವೇದ ಔಷದಿ ತೆಗೆದುಕೊಳ್ಳಲು ಜಬ್ಬಲಗುಡ್ಡಕ್ಕೆ ಇವರಿಬ್ಬರು ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ಸರಿ ಇಲ್ಲದಿದ್ದ ಕಾರಣ ಬೈಕ್ ಸ್ಕಿಡ್ ಆಗಿದೆ. ಪರಿಣಾಮ ಇಬ್ಬರು ಬೈಕಿನಿಂದ ಬಿದ್ದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.
ಸದ್ಯ ಈ ಘಟನೆ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.