ಕಾಮಗಾರಿ, ಸಾಮಗ್ರಿಗಳ ಖರೀದಿ ಬಿಲ್‌ನಲ್ಲಿ ಲಕ್ಷ ಲಕ್ಷ ಹಣ ಗೋಲ್ಮಾಲ್‌ – ಇಬ್ಬರು ಪಿಡಿಓ ಅಮಾನತು

Public TV
1 Min Read
Raichur PDO

ರಾಯಚೂರು: ಕರ್ತವ್ಯ ಲೋಪ ಹಾಗೂ ಸರ್ಕಾರಿ ಬೊಗ್ಗಸಕ್ಕೆ ನಷ್ಟ ಉಂಟುಮಾಡಿದ ಆರೋಪದ ಮೇಲೆ ರಾಯಚೂರು (Raichur) ಜಿಲ್ಲೆಯ ಇಬ್ಬರು ಪಿಡಿಓಗಳನ್ನು (PDO) ಅಮಾನತುಗೊಳಿಸಲಾಗಿದೆ.

ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಪಂ ಪಿಡಿಓ ಶಿವರಾಜ ಹಾಗೂ ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಪಂ ಪಿಡಿಓ ಗಂಗಮ್ಮ ಇಬ್ಬರನ್ನೂ ಅಮಾನತುಗೊಳಿಸಿ ರಾಯಚೂರು ಜಿಪಂ ಸಿಇಓ ಪಾಂಡ್ವೇ ರಾಹುಲ್ ತುಕಾರಾಮ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಕನಸಿನ ಕೋರ್ಸ್‌ಗಾಗಿ ಲಂಡನ್‌ಗೆ ಹೊರಟಿದ್ದ ಯುವತಿಯ ದುರಂತ ಅಂತ್ಯ!

Raichur PDO 2

ಪಿಡಿಓ ವಿರುದ್ಧ 15ನೇ ಹಣಕಾಸು ಯೋಜನೆಯಲ್ಲಿ 26,71,303 ರೂ. ದುರುಪಯೋಗ ಆರೋಪ ಕೇಳಿಬಂದಿತ್ತು. ಕಾಮಗಾರಿಗಳ ಬಿಲ್ ಹಾಗೂ ಸಾಮಗ್ರಿಗಳ ಖರೀದಿ ಬಿಲ್‌ಗಳಲ್ಲಿ ವ್ಯತ್ಯಾಸ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಈಹಿನ್ನೆಲೆ ಗಂಗಮ್ಮರನ್ನ ಅಮಾನತುಮಾಡಲಾಗಿದೆ. ಇದನ್ನೂ ಓದಿ: ತಿರುಪತಿಯಿಂದ ಬರುತ್ತಿದ್ದ ಆಂಧ್ರ ಬಸ್‌, ಲಾರಿ ನಡುವೆ ಭೀಕರ ಅಪಘಾತ – ಮೂವರು ಸ್ಥಳದಲ್ಲೇ ಸಾವು

ಇನ್ನೂ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಪಂ ಪಿಡಿಓ ಶಿವರಾಜ, 52.81 ಲಕ್ಷ ಮೊತ್ತದ ಅಪೂರ್ಣ ದಾಖಲೆ ನೀಡಿದ್ದ. ಉಳಿದ 14.77 ಲಕ್ಷ ಮೌಲ್ಯದ ಹಣ ಬಳಕೆಗೆ ದಾಖಲೆ ಕೊಟ್ಟಿರಲಿಲ್ಲ. ಹೀಗಾಗಿ ಕ್ರಿಯಾಯೋಜನೆಯ ಮೊತ್ತಕ್ಕಿಂತ ಹೆಚ್ಚು ಹಣ ಪಾವತಿಸಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಶಿವರಾಜನನ್ನ ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

Share This Article