ಬರ್ಮಿಂಗ್‌ಹ್ಯಾಮ್/ಇಸ್ಲಾಮಾಬಾದ್: ಬರ್ಮಿಂಗ್‌ಹ್ಯಾಮ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್-2022 ಕ್ರೀಡಾಕೂಟಕ್ಕೆ ತೆರಳಿದ್ದ ಇಬ್ಬರು ಪಾಕಿಸ್ತಾನಿ ಬಾಕ್ಸರ್‌ಗಳು ನಾಪತ್ತೆಯಾಗಿದ್ದಾರೆ ಎಂದು ನ್ಯಾಷನಲ್ ಫೆಡರೇಷನ್ ಹೇಳಿದೆ.
Advertisement
ಪಾಕಿಸ್ತಾನದ ಬಾಕ್ಸಿಂಗ್ ಫೆಡರೇಶನ್ (ಪಿಬಿಎಫ್) ಕಾರ್ಯದರ್ಶಿ ನಾಸಿರ್ ಟಾಂಗ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನ್ ತಂಡವು ಇಸ್ಲಾಮಾಬಾದ್‌ಗೆ ತೆರಳುವ ಒಂದೆರಡು ಗಂಟೆಗಳ ಮುನ್ನ ಬಾಕ್ಸರ್‌ಗಳಾದ ಸುಲೇಮಾನ್ ಬಲೋಚ್ ಮತ್ತು ನಜೀರುಲ್ಲಾ ನಾಪತ್ತೆಯಾಗಿದ್ದಾರೆ ಎಂದು ಖಚಿತಪಡಿಸಿದೆ. ಇದನ್ನೂ ಓದಿ: ಅರುಂಧತಿ ಸಿನಿಮಾ ನೋಡಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ
Advertisement
Advertisement
ಕಾಮನ್‌ವೆಲ್ತ್ ಕ್ರೀಡಾಕೂಟವು ಸೋಮವಾರ ಕೊನೆಗೊಂಡಿತು. ನಂತರ ಅವರು ತಂಡದೊಂದಿಗೆ ಪಾಕಿಸ್ತಾನಕ್ಕೆ ತರಳಬೇಕಿತ್ತು. ಇದೇ ವೇಳೆ ಅವರು ಕಾಣೆಯಾಗಿದ್ದಾರೆ. ಆದರೆ ಅವರ ಪಾಸ್‌ಪೋರ್ಟ್ ಹಾಗೂ ಟ್ರಾವೆಲ್‌ಗೆ ಸಂಬಂಧಿಸಿದ ದಾಖಲೆಗಳು ಪಾಕಿಸ್ತಾನ ಬಾಕ್ಸಿಂಗ್ ಫೆಡರೇಷನ್ ಅಧಿಕಾರಿಗಳ ಬಳಿಯೇ ಇವೆ ಎಂದು ಹೇಳಿದ್ದಾರೆ.
Advertisement
ಸುಲೇಮಾನ್ ಮತ್ತು ನಜೀರುಲ್ಲಾ ನಾಪತ್ತೆಯಾಗಿರುವ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಯುಕೆನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹಾಗೂ ಲಂಡನ್‌ನಲ್ಲಿರುವ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಈ ಬಗ್ಗೆ ತನಿಖೆ ನಡೆಸಲು ಪಾಕಿಸ್ತಾನ ಒಲಿಂಪಿಕ್ ಅಸೋಸಿಯೇಷನ್ (ಪಿಒಎ) 4 ಸದಸ್ಯರ ಸಮಿತಿಯನ್ನು ರಚಿಸಿದೆ ನಾಸಿರ್ ಟಾಂಗ್ ಹೇಳಿದ್ದಾರೆ. ಇದನ್ನೂ ಓದಿ: `ಮಾರ್ಕ್ ಆ್ಯಂಟನಿ’ ಚಿತ್ರೀಕರಣದಲ್ಲಿ ನಟ ವಿಶಾಲ್‌ಗೆ ಗಂಭೀರ ಗಾಯ
2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ವೇಟ್ ಲಿಫ್ಟಿಂಗ್ ಹಾಗೂ ಜಾವೆಲಿನ್ ಎಸೆತದಲ್ಲಿ ಎರಡು ಚಿನ್ನ ಸೇರಿದಂತೆ 8 ಪದಕಗಳೊಂದಿಗೆ ಹೊರಹೊಮ್ಮಿತು.