ರಾಯಚೂರು: ಪುರಸಭೆಯ ಕಾರ್ಯಕರ್ತರ ನಿರ್ಲಕ್ಷ್ಯದಿಂದ ಪತ್ರಿಕಾ ಛಾಯಾಗ್ರಾಹಕರಿಬ್ಬರು ಬೈಕ್ ಸಮೇತ ನೀರಿನ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಜಿಲ್ಲೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ನಡೆದಿದೆ.
ಛಾಯಾಗ್ರಾಹಕರಾದ ಗಯಾಸ್ ಹಾಗೂ ಶೇಕ್ ಬಾಬಾ ಗಾಯಗೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ಕ್ಯಾಮೆರಾ, ಲಾಪ್ ಟಾಪ್, ಪೆನ್‍ಡ್ರೈವ್ ಮತ್ತು ಮೊಬೈಲ್ ಹಾಳಾಗಿವೆ.
Advertisement
Advertisement
ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅವಾಂತರಗಳು ಸೃಷ್ಟಿಯಾಗುತ್ತಿವೆ. ಶಾಲಾ ಆವರಣದಲ್ಲಿ ನಿಲ್ಲುತ್ತಿದ್ದ ಮಳೆ ನೀರಿನ ಸಂಗ್ರಹಕ್ಕೆ 5 ಅಡಿ ಆಳದ ಗುಂಡಿ ತೋಡಲಾಗಿತ್ತು. ಆದರೆ ಮಾನ್ವಿ ಪಟ್ಟಣದ ಪುರಸಭೆಯವರು ಅಕ್ಕ ಪಕ್ಕ ಯಾವುದೇ ರೀತಿಯ ಸೂಚನಾ ಫಲಕವನ್ನು ಹಾಕಿಲ್ಲ. ಹೀಗಾಗಿ ಶಾಲಾ ಗೇಟ್ ಪಕ್ಕದಲ್ಲೇ ಇರುವ ಗುಂಡಿಯ ಆಳ ತಿಳಿಯದೇ ಬಂದ ಛಾಯಾಗ್ರಾಹಕರು ಬೈಕ್ ಸಹಿತವಾಗಿ ಗುಂಡಿಯಲ್ಲಿ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಓಡಾಡುವ ಸ್ಥಳದಲ್ಲೇ ಗುಂಡಿಯನ್ನು ತೋಡಿ ಹಾಗೇ ಬಿಟ್ಟಿರುವುದು ದೊಡ್ಡ ಅನಾಹುತಗಳಿಗೆ ಆಹ್ವಾನದಂತಿವೆ.
Advertisement
ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾನ್ವಿ ಪುರಸಭೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಛಾಯಾಗ್ರಾಹಕರು ಮುಂದಾಗಿದ್ದಾರೆ.
Advertisement