ಬಳ್ಳಾರಿ: ಉಪಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಚುನಾವಣಾ ಕಾರ್ಯಕ್ಕೆ ನೇಮಕವಾಗಿದ್ದ ಹೆಚ್ಚುವರಿ ಸಿಬ್ಬಂದಿ ಮೃತಪಟ್ಟರೆ, ಇನ್ನೊಬ್ಬರು ಮತದಾನ ಮಾಡಿ ಬಂದು ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳನ್ನು ವೈ.ಎಂ ಮಂಜುನಾಥ್(50) ಹಾಗೂ ಬಂಡಿ ನಾರಾಯಣಪ್ಪ (70) ಎಂದು ಗುರುತಿಸಲಾಗಿದೆ. ಅನಾರೋಗ್ಯದಿಂದ ಮಂಜುನಾಥ್ ಅವರು ಬಳ್ಳಾರಿ ಜಿಲ್ಲೆ ಕುರುಗೋಡು ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿ, ಮಂಡ್ಯ ಉಪಚುನಾವಣೆಯ ವಿವರ
Advertisement
Advertisement
ಇಂದು ಉಪಚುನಾವಣೆ ನಡೆಯುತ್ತಿರೋ ಹಿನ್ನೆಲೆಯಲ್ಲಿ ಮಂಜುನಾಥ್ ಅವರು ಹೊಸಪೇಟೆಯ ಆಕಾಶವಾಣಿ ಪ್ರದೇಶದಲ್ಲಿ 132ಂ ಬೂತ್ ಗೆ ನಿಯೋಜನೆ ಆಗಿದ್ದರು. ಆದ್ರೆ ಶುಕ್ರವಾರ ಮಸ್ಟರಿಂಗ್ ಸೆಂಟರ್ ನಲ್ಲಿ ಮಂಜುನಾಥ್ ಅವರ ಆರೋಗ್ಯ ಪರಿಸ್ಥಿತಿ ಗಮನಿಸಿದ ಹೊಸಪೇಟೆ ಎ.ಸಿ.ಲೋಕೇಶ್ ಹೆಚ್ಚುವರಿ ಸಿಬ್ಬಂದಿಯಾಗಿ ನಿಯೋಜಿಸಿ ಮನೆಗೆ ಕಳುಹಿಸಿದ್ದರು. ಆದ್ರೆ ಮಂಜುನಾಥ್ ಅವರು ರಾತ್ರಿ ಮನೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಇವರು ಕುರುಗೊಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ರಾಮನಗರ, ಜಮಖಂಡಿ ಉಪಚುನಾವಣಾ ಕ್ಷೇತ್ರದ ವಿವರ
Advertisement
ಬಂಡಿ ನಾರಾಯಣಪ್ಪ ಎಂಬವರು ಹೊಸಪೇಟೆಯ 7 ನೇ ವಾರ್ಡ್, ಅನಂತಶಯನ ಗುಡಿ ಏರಿಯಾದ ಪಂಡರಾಪುರ ಕಾಲೋನಿ ಹತ್ತಿರ ಬೂತ್ ಸಂಖ್ಯೆ 22 ರಲ್ಲಿ ಮತದಾನ ಮಾಡಿ ಬಂದು ಮನೆಯಲ್ಲಿ ಮೃತಪಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv