ಕಾರವಾರ: ಬೈಕ್ ಮತ್ತು ಪಿಕಪ್ ಟ್ರಕ್ ನಡುವೆ ನಡೆದ ಡಿಕ್ಕಿಯ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿವಾಡದಲ್ಲಿ ನಡೆದಿದೆ.
ತಾಲೂಕಿನ ಕಿರವತ್ತಿಯ ಮಾಲತೇಶ್(31) ರವಿದಾಸ್ (25) ಮೃತ ವ್ಯಕ್ತಿಗಳಾಗಿದ್ದಾರೆ. ಯಲ್ಲಾಪುರದಿಂದ ಅಂಕೋಲದ ಕಡಗೆ ಪಿಕಪ್ ಟ್ರಕ್ ಸಾಗುತಿದ್ದ ವೇಳೆ ಕಿರುವತ್ತಿಯಿಂದ ಯಲ್ಲಾಪುರಕ್ಕೆ ಸಾಗುತ್ತಿದ್ದ ಬೈಕ್ ವೇಗದಲ್ಲಿ ಬಂದು ಪಿಕಪ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಾಲತೇಶ್ ಹಾಗೂ ರವಿದಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Advertisement
ಘಟನೆಯಿಂದ ಚಾಲಕ ರವಿಶಂಕರ್ ಘಾಟಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವವನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.