-ಒಂದೇ ದಿನ 36 ಮಂದಿಗೆ ಸೋಂಕು
ಬೆಂಗಳೂರು: ಮತ್ತಿಬ್ಬರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ಇಂದು ಒಂದೇ ದಿನ 36 ಜನ ಸೋಂಕಿತರಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 315ಕ್ಕೆ ಏರಿಕೆ ಕಂಡಿದೆ.
Advertisement
ಬೆಳಗ್ಗೆ ಒಟ್ಟು 34 ಜನರಿಗೆ ಸೋಂಕು ತಗುಲಿರೋದು ದೃಢ ಪಟ್ಟಿತ್ತು. ಆ ಸಂಖ್ಯೆ ಮತ್ತಿಬ್ಬರು ಸೇರಿದ್ದು 36 ಆಗಿದೆ. ಕಲಬುರಗಿಯ 5 ವರ್ಷದ ಬಾಲಕ ಮತ್ತು 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 5 ವರ್ಷದ ಬಾಲಕನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿರೋದು ಆತಂಕಕ್ಕೆ ಕಾರಣವಾಗಿದೆ. ಇನ್ನು 32 ವರ್ಷ ವ್ಯಕ್ತಿ ಬೆಂಗಳೂರಿನಿಂದ ಕಲಬುರಗಿಗೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ಒಂದೇ ದಿನ ರಾಜ್ಯದಲ್ಲಿ ಅತಿ ಹೆಚ್ಚು 34 ಮಂದಿಗೆ ಕೊರೊನಾ
Advertisement
ರೋಗಿ ನಂಬರ್ 314: 32 ವರ್ಷದ ಪುರುಷನಾಗಿದ್ದು, ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೋಗಿ ನಂಬರ್ 315: 5 ವರ್ಷದ ಬಾಲಕನಾಗಿದ್ದು, ಕಲಬುರಗಿಯ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ವಿಜಯಪುರದಲ್ಲಿ ಎರಡು ಕುಟುಂಬಗಳಿಂದ 17 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, ಜಿಲ್ಲೆ ರೆಡ್ ಝೋನ್ ಪಟ್ಟಿಗೆ ಸೇರ್ಪಡೆಯಾಗಿದೆ. ಕಳೆದ 4 ದಿನಗಳಲ್ಲಿ 17 ಪ್ರಕರಣಗಳು ಪತ್ತೆಯಾಗಿದ್ದಕ್ಕೆ ಹೈ ಅಲರ್ಟ್ ಘೋಷಿಸಲಾಗಿದೆ.