LatestMain PostNational

ರಾಮಾಯಣ ರಸಪ್ರಶ್ನೆಯಲ್ಲಿ ಗೆದ್ದ ಮುಸ್ಲಿಂ ಯುವಕರು

Advertisements

ತಿರುವನಂತಪುರಂ: ಕೇರಳದ ಡಿಸಿ ಬುಕ್ಸ್ ರಾಜ್ಯಾದ್ಯಂತ ಆಯೋಜಿಸಿದ್ದ ಆನ್‌ಲೈನ್ ರಾಮಾಯಣ ರಸಪ್ರಶ್ನೆಯಲ್ಲಿ ಇಬ್ಬರು ಮುಸ್ಲಿಂ ಯುವಕರು ಗೆದ್ದು ಅಚ್ಚರಿ ಮೂಡಿಸಿದ್ದಾರೆ.

ಹೌದು, ಕೇರಳದ ಮಲಪ್ಪುರಂ ಮೂಲದ ವಲಾಂಚೇರಿಯ ಕೆಕೆಹೆಚ್‌ಎಂ ಇಸ್ಲಾಮಿಕ್ ಮತ್ತು ಕಲಾ ಕಾಲೇಜಿನಲ್ಲಿ ವಾಫಿ ಕೋರ್ಸ್(ಇಸ್ಲಾಮಿಕ್ ಅಧ್ಯಯನ)ನ ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀರ್ ಪಿ.ಕೆ ಹಾಗೂ ಮೊಹಮ್ಮದ್ ಬಸಿತ್ ಎಂ 1,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ರಾಮಾಯಣ ರಸಪ್ರಶ್ನೆಯಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಮುಸ್ಲಿಂ ಯುವಕರು ಹಿಂದೂ ಧರ್ಮದ ರಾಮಾಯಣ ಕಲಿತು ಇಂತಹ ಸಾಧನೆ ಮಾಡಿದ್ದಾದರೂ ಹೇಗೆ ಎಂದು ಕೇಳಿದರೆ, ಅವರು ಓದುತ್ತಿರುವ ವಾಫಿ ಕೋರ್ಸ್ ಇದಕ್ಕೆಲ್ಲಾ ಕಾರಣ ಎನ್ನುತ್ತಾರೆ.

ವಾಫಿ ಕೋರ್ಸ್ ಎಂಬುದು 8 ವರ್ಷಗಳ ಇಸ್ಲಾಮಿಕ್ ಅಧ್ಯಯನವಾಗಿದೆ. ಇದು ಸ್ನಾತಕೋತ್ತರ ಮಟ್ಟಕ್ಕೂ ಹೋಗುತ್ತದೆ. ಇದು 3 ವರ್ಷಗಳ ವಿಶ್ವವಿದ್ಯಾಲಯದ ಪದವಿ ಕೋರ್ಸ್ ಅನ್ನೂ ಒಳಗೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ನಿರಾಣಿ ಆಹ್ವಾನ

ರಸಪ್ರಶ್ನೆಯಲ್ಲಿ ಗೆದ್ದಿರುವ ಮೊಹಮ್ಮದ್ ಜಬೀರ್ ಈ ಬಗ್ಗೆ ವಿವರಿಸಿ, ತಾನು ವಾಫಿ ಪಠ್ಯಕ್ರಮದಲ್ಲಿ ಭಾರತೀಯ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮದ ಕುರಿತಾದ ವಿಷಯಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಿದ್ದೆ. ಈ ಕೋರ್ಸ್‌ನ ಇತರ ಭಾಗಗಳಲ್ಲಿ ಕ್ರಿಶ್ಚಿಯನ್ ಧರ್ಮ, ಜುದಾಯಿಸಂ ಹಾಗೂ ಟಾವೊ ಧರ್ಮದ ಕುರಿತಾದ ವಿಷಯಗಳೂ ಇವೆ ಎಂದಿದ್ದಾರೆ.

ಡಿಸಿ ಬುಕ್ಸ್‌ನ ಟೆಲಿಗ್ರಾಮ್ ಗ್ರೂಪ್‌ನಲ್ಲಿ ರಸಪ್ರಶ್ನೆ ಸ್ಪರ್ಧೆಯ ಬಗ್ಗೆ ತಿಳಿದುಕೊಂಡೆ. ಬಳಿಕ ಸ್ವತಃ ನೋಂದಾಯಿಸಿಕೊಂಡೆ. ರಸಪ್ರಶ್ನೆಗೆ ಸಂಬಂಧಿಸಿದಂತೆ ಯಾವುದೇ ದೊಡ್ಡ ಮಟ್ಟದ ಸಿದ್ಧತೆಗಳನ್ನು ನಾನು ಮಾಡಿಕೊಂಡಿರಲಿಲ್ಲ ಎಂದು ಜಬೀರ್ ತಿಳಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್ ಪ್ರಿಯರಿಗೆ ಶುಭ ಸುದ್ದಿ – ಭಾರತದಲ್ಲಿ ಮತ್ತೆ ಆ್ಯಪ್ ಆರಂಭ?

ರಾಮಾಯಣ ರಸಪ್ರಶ್ನೆ ಸ್ಪರ್ಧೆ ಜುಲೈ 23 ರಿಂದ 25 ರ ವರೆಗೆ ನಡೆದಿತ್ತು. ಸಮಾಜಶಾಸ್ತ್ರದಲ್ಲಿ ಬಿಎ ಮುಗಿಸಿರುವ ಜಬೀರ್ ಅಂತಿಮ ವರ್ಷದ ವಾಫಿ ಸ್ನಾತ್ತಕೋತ್ತರ ವಿದ್ಯಾರ್ಥಿಯಾಗಿದ್ದಾರೆ. ಎರಡನೇ ವಿಜೇತ ಬಸಿತ್ 5ನೇ ವರ್ಷದ ವಾಫಿ ವಿದ್ಯಾರ್ಥಿಯಾಗಿದ್ದಾರೆ.

Live Tv

Leave a Reply

Your email address will not be published.

Back to top button