ಎರಡು ತಿಂಗಳ ಮಗು ಮೈಕ್ರೋವೇವ್‍ನಲ್ಲಿ ಶವವಾಗಿ ಪತ್ತೆ!

Public TV
1 Min Read
baby pic

ನವದೆಹಲಿ: ಎರಡು ತಿಂಗಳ ಹೆಣ್ಣು ಮಗುವೊಂದು ಮೈಕ್ರೋವೇವ್ ಓವನ್‍ನಲ್ಲಿ ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ದೆಹಲಿಯ ಚಿರಾಗ್ ಡಿಲ್ಲಿ ಪ್ರದೇಶದಲ್ಲಿ ನಡೆದಿದೆ.

ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಮಗುವಿನ ಪೋಷಕರು. ಇವರಿಗೆ 4 ವರ್ಷದ ಗಂಡು ಮಗನಿದ್ದಾನೆ. ಜನವರಿಯಲ್ಲಿ ಹೆಣ್ಣು ಮಗುವೊಂದು ಜನಿಸಿತ್ತು. ಆದರೆ ಡಿಂಪಲ್ ಕೌಶಿಕ್‍ಗೆ ಹೆಣ್ಣುಮಗುವಿನ ಬಗ್ಗೆ ಅಸಮಾಧಾನವಿತ್ತು. ಪ್ರತಿನಿತ್ಯ ಪತಿಯ ಜೊತೆ ಜಗಳವಾಡುತ್ತಿದ್ದರು.

ಆದರೆ ನಿನ್ನೆ ಡಿಂಪಲ್ ಕೌಶಿಕ್ ಮನೆ ಬೀಗ ಹಾಕಿಕೊಂಡಿದ್ದರು. ಎಷ್ಟೇ ಪ್ರಯತ್ನಿಸಿದ್ದರೂ ಮನೆಯ ಬೀಗ ತೆಗೆಯುತ್ತಿರಲಿಲ್ಲ. ಇದರಿಂದಾಗಿ ಆಕೆಯ ಅತ್ತೆ, ಬಾಗಿಲನ್ನು ತೆಗಿಯದಿದ್ದರೇ ನಾವು ಗಾಜು ಒಡೆದು ಮನೆಯನ್ನು ಪ್ರವೇಶಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಆದರೂ ತೆಗೆಯಿದ್ದಾಗ ಅವರೇ ಗಾಜನ್ನು ಒಡೆದು ಮನೆ ಪ್ರವೇಶಿಸಿದ್ದಾರೆ. ಅಲ್ಲಿ ಡಿಂಪಲ್ ಕೌಶಿಕ್ ಹಾಗೂ ಅವಳ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಆದರೆ ಎರಡು ತಿಂಗಳ ಮಗು ಕಾಣೆಯಾಗಿತ್ತು.

crime scene e1602054934159 1

ಇದರಿಂದಾಗಿ ನೆರೆಹೊರೆಯವರ ಸಹಾಯದಿಂದ ಮಗುವನ್ನು ಮನೆಯಲ್ಲಿ ಹುಡುಕಿದಾಗ 2ನೇ ಮಹಡಿಯಲ್ಲಿದ್ದ ಮೈಕ್ರೋವೇವ್‍ನಲ್ಲಿ ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಮಗುವಿನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಮಯದಲ್ಲಿ ಮಗುವಿನ ತಂದೆ ಹತ್ತಿರದ ಅಂಗಡಿಗೆ ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಪ್ರದರ್ಶನ: ರಾಜಸ್ಥಾನದ ಕೋಟಾದಲ್ಲಿ 144 ಸೆಕ್ಷನ್ ಜಾರಿ

POLICE JEEP

ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಸಾಧ್ಯವಿರುವ ಎಲ್ಲಾ ಕೋನಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಬೆನಿಟಾ ಮೇರಿ ಜೈಕರ್ ತಿಳಿಸಿದರು. ಈಗಾಗಲೇ ಮಗುವಿನ ಪೋಷಕರಾದ ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಮ್ರಾನ್ ಖಾನ್ ಬಳಿಕ ಪಾಕ್ ಪ್ರಧಾನಿ ಆಗ್ತಾರಾ ಶೆಹಬಾಜ್ ಷರೀಫ್?

Share This Article
Leave a Comment

Leave a Reply

Your email address will not be published. Required fields are marked *