ಮಂಗಳೂರು: ಮಹಾಮಾರಿ ಕೊರೊನಾ ಜನರನ್ನು ಭಯ ಭೀತಿಗೊಳಿಸಿದ್ದು, ಇದೀಗ ಕಾಸರಗೋಡಿನ ಇಬ್ಬರು ಶಾಸಕರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗುತ್ತಿದೆ.
ಹೌದು. ಕಾಸರಗೋಡು ಶಾಸಕ ಎನ್‍ಎ ನೆಲ್ಲಿಕುನ್ನು ಹಾಗೂ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಈ ಇಬ್ಬರಿಗೆ ಇದೀಗ ಕೊರೊನಾ ಭೀತಿ ಆರಂಭವಾಗಿದೆ. ಸದ್ಯ ಈ ಇಬ್ಬರು ಶಾಸಕರನ್ನು ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನಲ್ಲಿರಿಸಲಾಗಿದೆ.
Advertisement
Advertisement
ಈ ಇಬ್ಬರು ಶಾಸಕರು ಮದುವೆ ಸಮಾರಂಭವೊಂದರಲ್ಲಿ ಕೊರೊನಾ ಪೀಡಿತ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕೂಡ ವ್ಯಕ್ತಿ ಭಾಗವಹಿಸಿದ್ದಾನೆ. ಅಲ್ಲದೆ ರೋಗಿ ಶಾಸಕ ಕಮುರುದ್ದೀನ್ ಕೈಕುಲುಕಿದ್ದಾನೆ ಎಂಬುದಾಗಿ ವರದಿಯಾಗಿದೆ.
Advertisement
ಕೊರೊನಾ ಪೀಡಿತ ವ್ಯಕ್ತಿ ಮಾರ್ಚ್ 11 ರಂದು ಬೆಳಗ್ಗೆ 8 ಗಂಟೆಗೆ ದುಬೈಯಿಂದ ಕೊಯಿಕೋಡ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ. ನಂತರ ಲಾಡ್ಜ್ ವೊಂದರಲ್ಲಿ ನೆಲೆಸಿದ್ದಾನೆ. ಮರು ದಿನ ಕೊಯಿಕೋಡ್ ನಿಂದ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸಿದ್ದಾನೆ. ಆ ನಂತರ ಕಾಸರಗೋಡಿನ ಹಲವು ಪ್ರದೇಶಗಳಲಿ ಸುತ್ತಾಡಿದ್ದಾನೆ. 5 ದಿನ ಹಲವು ಮಂದಿಯನ್ನು ಕೂಡ ಭೇಟಿ ಮಾಡಿದ್ದಾನೆ.
Advertisement
ಮಾರ್ಚ್ 16ರಂದು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದಾನೆ. ಈ ವೇಳೆ ಆತನ ಗಂಟಲು ದ್ರವವನ್ನು ಟೆಸ್ಟ್ ಮಾಡಿದಾಗ ಆತನಿಗೆ ಕೊರೊನಾ ಇರುವುದು ಬೆಳಕಿಗೆ ಬಂದಿದೆ. ಸದ್ಯ ಕೊರೊನಾ ಪೀಡಿತ ವ್ಯಕ್ತಿ ಯಾರನ್ನೆಲ್ಲ ಸಂಪರ್ಕಿಸಿದ್ದಾನೆ ಎಂಬುದನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.