ನಾಪತ್ತೆಯಾಗಿದ್ದ ಪ್ರತಿಷ್ಠಿತ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಪತ್ತೆ!

Public TV
1 Min Read
lesbian partner

ಬೆಂಗಳೂರು: ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ಇದೀಗ ಪತ್ತೆಯಾಗಿದ್ದಾರೆ.

ದ್ವಿತೀಯ ಪಿಯುಸಿ ಓದುತ್ತಿದ್ದ ಹರ್ಷಿತಾ ಹಾಗೂ ಮರಿಟಾ ವೈಶಾಲಿ ಇಬ್ಬರು ಸ್ನೇಹಿತೆಯರಾಗಿದ್ದು, ನಾವಿನ್ನು ಮನೆಗೆ ಬರುವುದಿಲ್ಲ. ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ತಿಳಿಸಿ ಜುಲೈ 25 ರಿಂದ ಕಣ್ಮರೆಯಾಗಿದ್ದರು. ಈ ಸಂಬಂಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಇದನ್ನೂ ಓದಿ: ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟ: ಸಿದ್ದರಾಮಯ್ಯ

POLICE JEEP

ವಿದ್ಯಾರ್ಥಿನಿಯರು ನಾಪತ್ತೆಯಾಗಲು ಕಾರಣವೇನು? ಇದರ ಹಿಂದೆ ಯಾರಾದದರೂ ಕೈವಾಡ ಇದೆಯಾ ಎಂಬ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇಬ್ಬರು ವಿದ್ಯಾರ್ಥಿನಿಯರಿಗಾಗಿ ತೀವ್ರವಾಗಿ ಹುಡುಕಾಟ ನಡೆಸಲು ಆರಂಭಿಸಿದ್ದರು. ಇದನ್ನೂ ಓದಿ: ಒಂದೇ ವರ್ಷದೊಳಗಡೆ ಜಡ್ಜ್‌ ಉತ್ತಮ್ ಆನಂದ್ ಕೊಲೆ ಕೇಸ್‌ ತೀರ್ಪು ಪ್ರಕಟ – ಆಟೋರಿಕ್ಷಾ ಚಾಲಕ, ಸಹಚರ ದೋಷಿ

ಇದೀಗ ಹರ್ಷಿತಾ ಹಾಗೂ ಮರಿಟಾ ವೈಶಾಲಿ ಚೆನ್ನೈನಲ್ಲಿ ಪತ್ತೆಯಾಗಿದ್ದು, ಇಬ್ಬರನ್ನು ತಡರಾತ್ರಿ ಪೊಲೀಸರು ಬೆಂಗಳೂರಿಗೆ ಕರೆ ತಂದಿದ್ದಾರೆ. ನಂತರ ಇಬ್ಬರು ವಿದ್ಯಾರ್ಥಿನಿಯರ ಪೋಷಕರನ್ನು ಠಾಣೆಗೆ ಕರೆಸಿ ಹಸ್ತಾಂತರಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *