ಬೀಜಿಂಗ್: ಕಟ್ಟಡದ ನಾಲ್ಕನೇ ಅಂತಸ್ತಿನ ಫ್ಲ್ಯಾಟ್ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಇಬ್ಬರು ಯುವಕರು ರಕ್ಷಣೆ ಮಾಡಿದ್ದಾರೆ. ಬಾಲಕಿಯನ್ನು ರಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಯುವಕರನ್ನು ‘ಸೂಪರ್ ಹೀರೋ’ ಅಂತಾ ಕೊಂಡಾಡುತ್ತಿದ್ದಾರೆ.
ಚೀನಾದ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಸು ಎಂಬಲ್ಲಿ ಸೆಪ್ಟೆಂಬರ್ 7ರಂದು ಈ ಘಟನೆ ನಡೆದಿದೆ. ಅಪಾಯದಲ್ಲಿ ಸಿಲುಕಿದ್ದ ಬಾಲಕಿಯನ್ನು ನೋಡಿದ ಯುವಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಆಕೆಯನ್ನು ರಕ್ಷಿಸಿದ್ದಾರೆ. ಒಂದು ವೇಳೆ ಯುವಕರು ಕೊಂಚ ಆಯತಪ್ಪಿದ್ರೂ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಸಾಧ್ಯತೆ ಇತ್ತು.
ಏನದು ವಿಡಿಯೋ?
ಐದು ಅಂತಸ್ತಿನ ಕಟ್ಟಡದಲ್ಲಿ ಬಾಲಕಿ 4ನೇ ಫ್ಲೋರ್ ಮನೆಯ ಕಿಟಕಿಯಿಂದ ಹೊರ ಬಿದ್ದು ಎಸಿಯ ಕಂಡೆನ್ಸರ್ ಯೂನಿಟ್ (AC Condenser Unit) ಮೇಲೆ ನೇತಾಡುತ್ತಿದ್ದಳು. ಸ್ಥಳದಲ್ಲಿ ಜನರು ಚೀರಾಡುತ್ತಿದ್ದಂತೆ ಯುವಕರಿಬ್ಬರು ಹಾಗೇ ನೇರವಾಗಿ ಏಣಿಯನ್ನು ಸಹ ಬಳಸದೇ ನೋಡ ನೋಡುತ್ತಿದ್ದಂತೆ ಕಟ್ಟಡವನ್ನು ಹತ್ತಿದ್ದಾರೆ. ಬಾಲಕಿಯ ಬಳಿ ತಲುಪಿದ ಇಬ್ಬರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಈ ಘಟನೆ ನಡೆದಾಗ ಬಾಲಕಿ ಮನೆಯಲ್ಲಿ ಯಾರು ಇರಲಿಲ್ಲ. ಆಕೆ ಮಲಗಿದ್ದರಿಂದ ಬಾಗಿಲು ಹಾಕಿಕೊಂಡು ಪೋಷಕರು ಹೊರ ಹೋಗಿದ್ದರು. ನಿದ್ದೆಯಿಂದ ಎಚ್ಚರಗೊಂಡ ಬಾಲಕಿ ಮಂಪರಿನಲ್ಲಿ ಕಿಟಕಿ ಬಳಿ ಬಂದಿದ್ದರಿಂದ ಆಯತಪ್ಪಿ ಬಿದ್ದಿದ್ದಾಳೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ನನ್ನ ಮಗಳ ಜೀವವನ್ನು ಉಳಿಸಿದ ಇಬ್ಬರು ಸೂಪರ್ ಹೀರೋಗಳಿಗೆ ನಾನು ಚಿರಋಣಿ ಆಗಿದ್ದೇನೆ. ಯುವಕರು ತಮ್ಮ ಜೀವವನ್ನ ಪಣಕ್ಕಿಟ್ಟು ನನ್ನ ಮಗಳನ್ನು ರಕ್ಷಿಸಿದ್ದಾರೆ. ಇನ್ನು ಮುಂದೆ ಮಗಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಎಲ್ಲಿಯೂ ಹೋಗಲಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Thanks to two superheroes — known everyday as a courier and a small business owner — a 3-year-old child trapped outside the 4th floor in E China’s Jiangsu was saved from danger in only two minutes. pic.twitter.com/NjTz6O4Q7K
— People's Daily, China (@PDChina) September 9, 2018