ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹವನ್ನು ಅಂಗೀಕರಿಸಿ: ಸುಪ್ರೀಂಕೋರ್ಟ್‍ಗೆ ಅರ್ಜಿ

Public TV
1 Min Read
SAME SEX

ನವದೆಹಲಿ: ವಿಶೇಷ ವಿವಾಹ ಕಾಯ್ದೆ (Special Marriage Act) ಯಡಿ ಸಲಿಂಗ ವಿವಾಹ (Same-Sex Marriage ಕ್ಕೂ ಮಾನ್ಯತೆ ನೀಡುವಂತೆ ಸಲಿಂಗಕಾಮಿ ದಂಪತಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಮುಖ್ಯ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ-ಸದಸ್ಯ ಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ.

Supreme Court

ಹೈದರಾಬಾದ್ ಮೂಲದ ಸಲಿಂಗಕಾಮಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್ ಈ ಅರ್ಜಿ ಸಲ್ಲಿಸಿದ್ದು, ಒಬ್ಬರ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು LGBTQ+ ನಾಗರಿಕರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿ ಸಿಎಂ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು – ಮನೀಶ್ ಸಿಸೋಡಿಯಾ ಆರೋಪ

5 facts about same-sex marriage | Pew Research Center

10 ವರ್ಷದ ಹಿಂದೆ ಅಧಿಕೃತ ಮದುವೆ ನಡೆದಿದ್ದರು ಈವರೆಗೂ ಅವರು ವಿವಾಹಿತ ದಂಪತಿ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ದಂಪತಿ ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಕೋರ್ಟ್ ಹೇಗೆ ರಕ್ಷಿಸುತ್ತದೆಯೋ ಅದರಂತೆ ಸಲಿಂಗ ವಿವಾಹವು ಈ ಸಾಂವಿಧಾನಿಕವಾಗಿ ಅಧಿಕೃತಗೊಳಿಸಲು ಮನವಿ ಮಾಡಿದೆ.

supreme court 12

ಈ ಪ್ರಕರಣ ಸೆಕ್ಷನ್ 377 ಅನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ LGBTQ+ ವ್ಯಕ್ತಿಗಳು ಸಮಾನತೆ, ಘನತೆ ಮತ್ತು ಗೌಪ್ಯತೆಯ ಹಕ್ಕನ್ನು ಇತರ ಎಲ್ಲಾ ನಾಗರಿಕರಿಗೆ ಸಮಾನವಾಗಿ ಸಂವಿಧಾನವು ಖಾತರಿಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇವುಗಳನ್ನು ಆಧರಿಸಿ ಕೋರ್ಟ್‍ಗೆ ಈಗ ಅರ್ಜಿ ಸಲ್ಲಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *