ಬೆಂಗಳೂರು: ನನ್ನ ಹೆಂಡತಿ, ನನ್ನ ಹೆಂಡತಿ, ಎಂದು ಇಬ್ಬರು ಪುರುಷರು ಹೆದ್ದಾರಿ ಪಕ್ಕದಲ್ಲಿ ಬಡಿದಾಡಿಕೊಂಡ ವಿಚಿತ್ರ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಾವಿಕೆರೆ ಕ್ರಾಸ್ ಬಳಿ ನಡೆದಿದೆ.
ನೆಲಮಂಗಲ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಈ ಘಟನೆ ನಡೆದಿದೆ. ಚಿಕ್ಕಬಿದರಕಲ್ಲು ನಿವಾಸಿ ಮೂರ್ತಿ ಹಾಗೂ ಮತ್ತೊಬ್ಬ ಸಿದ್ದು ಎಂಬವರು ರಕ್ತ ಬರುವ ಹಾಗೆ ಬಡಿದಾಡಿಕೊಂಡಿದ್ದಾರೆ. ಈ ಇಬ್ಬರು ಪುರುಷರು ಒಬ್ಬ ಮಹಿಳೆಗಾಗಿ ನಾನು ಮದುವೆಯಾಗಿರೋದು, ಈಕೆ ನನಗೆ ಸೇರಬೇಕೆಂದು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಹೆದ್ದಾರಿಯಲ್ಲಿ ಗುದ್ದಾಟ ಮಾಡಿದ್ದರಿಂದ ದಾರಿಯಲ್ಲಿ ಹೋಗುವವರು ತಮ್ಮ ಮೊಬೈಲಿನಲ್ಲಿ ಇಬ್ಬರು ಪುರುಷರು ಗುದ್ದಾಟವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ ಯಾರು ಸಹ ಜಗಳ ಬಿಡಿಸುವ ಪ್ರಯತ್ನವನ್ನು ಕೂಡ ಮಾಡಿಲ್ಲ.
ಈ ಬಗ್ಗೆ ಮಹಿಳೆಯನ್ನು ಕೇಳಿದರೆ ಒಮ್ಮೆ ಮೂರ್ತಿಯನ್ನು ಮದುವೆಯಾಗಿದ್ದೇನೆ. ಮತ್ತೊಮ್ಮೆ ಸಿದ್ದುವನ್ನು ಮದುವೆಯಾಗಿದ್ದೇನೆ ಎಂದು ಗೊಂದಲದ ಉತ್ತರವನ್ನು ಕೊಟ್ಟಿದ್ದಾರೆ. ಈಕೆ ಈಗಾಗಲೇ ಪರ ಪುರುಷನೊಂದಿಗೆ ವಿವಾಹವಾಗಿದ್ದು, ವಿಚ್ಛೇದನ ಕೂಡ ಆಗಿದೆ. ಹೀಗಾಗಿ ಇವರಿಬ್ಬರು ಈಕೆಯನ್ನು ಮದುವೆಯಾಗಬೇಕೆಂದು ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews