ರೈಪುರ್: ಛತ್ತೀಸ್‍ಗಢ (Chhattisgarh) ಪೊಲೀಸರು ಸೋಮವಾರ ಮುಂಜಾನೆ ನಡೆಸಿದ ಎನ್‍ಕೌಂಟರ್‌ನಲ್ಲಿ (Encounter) ಮಹಿಳೆ ಸೇರಿ ಇಬ್ಬರು ಮಾವೋವಾದಿಗಳು (Maoists) ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂತೇಶಪುರಂ (Danteshpuram) ಸಮೀಪದ ಅರಣ್ಯದಲ್ಲಿ ನಕ್ಸಲರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಮುಂಜಾನೆ 5:30ರ ವೇಳೆಗೆ ದಾಳಿ ನಡೆಸಲಾಗಿದೆ. ಮೃತರನ್ನು ಎರ್ರಾ ಮತ್ತು ಭೀಮೆ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಎರ್ರಾ ಸುಳಿವಿಗೆ 8 ಲಕ್ಷ ರೂ. ಹಾಗೂ ಭಿಮೆ ಸುಳಿವಿಗೆ 3 ಲಕ್ಷ ರೂ. ಘೋಷಣೆ ಮಾಡಲಾಗಿತ್ತು ಎಂದು ಸುಕ್ಮಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (Superintendent of Police) ಸುನಿಲ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಅಪ್ರಾಪ್ತರು ಸೇರಿ ನಾಲ್ವರು ಮಾವೋವಾದಿಗಳು ಅರೆಸ್ಟ್
Advertisement
Advertisement
ಮೃತಪಟ್ಟ ಇಬ್ಬರು 24ಕ್ಕೂ ಹೆಚ್ಚು ದಾಳಿ ಹಾಗೂ ಹಿಂಸಾಚಾರದಲ್ಲಿ ಬೇಕಾಗಿದ್ದರು. ಅವರು ಅಡಗಿದ್ದ ಸ್ಥಳದಲ್ಲಿ ಸುಧಾರಿತ ಸ್ಫೋಟಕಗಳು ಹಾಗೂ ಸ್ವಯಂಚಾಲಿತ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಜಿಲ್ಲಾ ಮೀಸಲು ಪಡೆಯ (District Reserve Guard) ಹಾಗೂ ಸಿಆರ್‌ಪಿಎಫ್ (CRPF) ಸಿಬ್ಬಂದಿ ಅರಣ್ಯವನ್ನು ಸುತ್ತುವರಿದಾಗ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಮೃತರಾಗಿದ್ದಾರೆ. ಅಲ್ಲದೆ ಸಮೀಪದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಾಯುಸೇನೆಯ ವಿಮಾನ ಪತನ- ಮೂವರ ದುರ್ಮರಣ