ಶಿವಮೊಗ್ಗ: ಪ್ರೀತಿ (Love) ಎಂಬುದು ಮಾಯೆ ಇದ್ದಂತೆ, ಈ ಸಾಗರಲ್ಲಿ ಈಜಿ ದಡ ಸೇರಿದವರಿಗಿಂತ ಮುಳುಗಿದವರೇ ಹೆಚ್ಚು ಎನ್ನುತ್ತಾರೆ ತಿಳಿದವರು. ಕೆಲವರು ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಜೀವನವನ್ನು ಜಯಿಸಿದ್ರೆ, ಇನ್ನೂ ಕೆಲವರು ಹೆದರಿ ಆತ್ಮಹತ್ಯೆ ಮಾಡಿಕೊಳ್ತಾರೆ. ಇದೇ ರೀತಿಯ ಘಟನೆಯೊಂದು ಈಗ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ನಡೆದಿದೆ.
ಹೌದು. ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರೇಮಿಗಳಿಬ್ಬರು (Lovers) ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದ್ರೆ ಘಟನೆಯಲ್ಲಿ ಯುವಕ ಪಾರಾಗಿದ್ದು, ಯುವತಿ ಸಾವನ್ನಪ್ಪಿದ್ದಾಳೆ. ಅಂತರಗಂಗೆ ಭೋವಿ ಕಾಲೋನಿ ನಿವಾಸಿ ಸ್ವಾತಿ (19) ಮೃತಪಟ್ಟಿದ್ದು, ಯುವಕ ಸೂರ್ಯ (20) ಪಾರಾಗಿದ್ದಾನೆ. ಇದನ್ನೂ ಓದಿ: ಸ್ವಾಮೀಜಿ ಬಯಕೆ ಈಡೇರಿಸುವಂತೆ ಮಹಿಳಾ ಅಧ್ಯಾಪಕರಿಂದ್ಲೇ ವಿದ್ಯಾರ್ಥಿನಿಯರ ಮೇಲೆ ಒತ್ತಡ – ತನಿಖೆ ತೀವ್ರ
ಯುವತಿಯು ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಯುವಕ ಕೆಲಸಕ್ಕೆ ಹೋಗುತ್ತಿದ್ದ. ಇವರಿಬ್ಬರು ನೆರೆಹೊರೆಯ ನಿವಾಸಿಗಳಾಗಿದ್ದು, ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿ, ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಬಳ್ಳಾರಿ | 200ಕ್ಕೂ ಹೆಚ್ಚು ಬಾಡಿಗೆ ಕಾರುಗಳನ್ನು ಅಡವಿಟ್ಟು ಹಣಪಡೆದು ಪರಾರಿ
ಇದರಿಂದ ಮನನೊಂದ ಜೋಡಿ ಇರುವೆ ಪುಡಿ ಸೇವಿಸಿ ಬಳಿಕ ಅಂತರಗಂಗೆಯ ಉಕ್ಕುಂದದಲ್ಲಿರುವ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಮರದ ದಿಮ್ಮಿಯ ಸಹಾಯದಿಂದ ಸೂರ್ಯ ಪಾರಾಗಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಸಾವನ್ನಪ್ಪಿದ್ದು, ಆಕೆಯ ಮೃತದೇಹವನ್ನು ಕಾಲುವೆಯಿಂದ ಮೇಲಕ್ಕೆತ್ತಲಾಗಿದೆ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.