ಮುಂಬೈ: ಒಂದೇ ತಿಂಗಳಲ್ಲಿ ಇಬ್ಬರು ಲೆಜೆಂಡ್ ಸಿಂಗರ್‍ಗಳನ್ನು ಭಾರತ ಚಿತ್ರರಂಗ ಕಳೆದುಕೊಂಡಿದೆ. ಪರಿಣಾಮ ಟ್ವೀಟ್‍ನಲ್ಲಿ ಭಾವನ್ಮಾಕ ಸಾಲುಗಳನ್ನು ಬರೆದುಕೊಂಡು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇದೇ ತಿಂಗಳು ಫೆ.06 ರಂದು ಲತಾ ಮಂಗೇಶ್ವರ್ ಅಗಲಿದ್ದು, ನಿನ್ನೆ ರಾತ್ರಿ ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹರಿ ನಿಧನರಾಗಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳು, ನಮ್ಮ ಭಾರತೀಯ ಚಿತ್ರರಂಗ ಬಡವಾಗಿದೆ. ಇಬ್ಬರು ಪ್ರಸಿದ್ಧ ಗಾಯಕರನ್ನು ನಮ್ಮ ಚಿತ್ರರಂಗ ಕಳೆದುಕೊಂಡಿದೆ ಎಂದು ಸಂತಾಪ ಸೂಚಿಸುತ್ತಿದ್ದಾರೆ.
Advertisement
https://twitter.com/Chaipeelofranss/status/1493826182697025537?ref_src=twsrc%5Etfw%7Ctwcamp%5Etweetembed%7Ctwterm%5E1493826182697025537%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Fentertainment%2Ftwo-legends-in-heaven-now-on-twitter-tributes-to-bappi-lahiri-and-lata-mangeshkar-2771818
Advertisement
ಭಾರತೀಯ ಸಿನಿಮಾರಂಗದಲ್ಲಿ ಸಂಗೀತದ ಅಭಿಮಾನಿಗಳಿಗೆ ಈ ತಿಂಗಳು ತುಂಬಾ ಕಷ್ಟದ ದಿನವಾಗಿದೆ. ಈ ತಿಂಗಳಲ್ಲಿಯೇ ಇಬ್ಬರು ಲೆಜೆಂಡ್ ಗಳನ್ನು ನಮ್ಮ ಭಾರತೀಯ ಚಿತ್ರರಂಗ ಕಳೆದುಕೊಂಡಿದೆ. ಫೆಬ್ರವರಿ 6 ರಂದು ಲತಾ ಮಂಗೇಶ್ಕರ್, ನಿನ್ನೆ ರಾತ್ರಿ ಬಪ್ಪಿ ಲಹರಿ. ಪರಿಣಾಮ ಇಂದು ಟ್ವಿಟ್ಟರ್ ನಲ್ಲಿ, ಇಬ್ಬರನ್ನೂ ಪ್ರೀತಿ ಮತ್ತು ಗೌರವದಿಂದ ಸ್ಮರಿಸಲಾಗುತ್ತಿದೆ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು
Advertisement
Its just February, and we've lost three legendary singers!
Om Shanti ????#LataMangeshkar #SandhyaMukherjee #BappiLahiri pic.twitter.com/ktaeI6dmMs
— Arijit Singh (@TrollASHaters) February 16, 2022
Advertisement
ಲತಾ ಮಂಗೇಶ್ಕರ್ ಮತ್ತು ಬಪ್ಪಿ ಲಹರಿ ಹಾಡುಗಳನ್ನು ಮರೆಯಲು ಆಗುವುದೇ ಇಲ್ಲ. ಇವರಿಬ್ಬರ ಕೀರ್ತಿ ಮತ್ತು ಅಭಿಮಾನಿ ಬಳಗ ದೊಡ್ಡದು. ಬಪ್ಪಿ ಲಹರಿ ಅವರು ನಿನ್ನೆ ತಡರಾತ್ರಿ ಮುಂಬೈ ಆಸ್ಪತ್ರೆಯಲ್ಲಿ ಸ್ಲೀಪ್ ಅಪ್ನಿಯಾದಲ್ಲಿ ನಿಧನರಾದರು. ಈ ಹಿನ್ನೆಲೆ ಟ್ವಿಟ್ಟರ್ ನಲ್ಲಿ, ಇಬ್ಬರು ಲೆಜೆಂಡ್ಸ್ ಈಗ ಸ್ವರ್ಗದಲ್ಲಿದ್ದಾರೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಭಾರತೀಯ ಸಂಗೀತ ಉದ್ಯಮ 2 ರತ್ನಗಳನ್ನು ಕಳೆದುಕೊಂಡಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ನಿನ್ನೆ ನಿಧನರಾದ ಬಪ್ಪಿ ಲಾಹಿರಿ, ಲತಾ ಮಂಗೇಶ್ಕರ್ ಮತ್ತು ಬಂಗಾಳಿ ಗಾಯಕಿ ಸಂಧ್ಯಾ ಮುಖರ್ಜಿ ಅವರನ್ನು ನೆನಪಿಸಿಕೊಂಡು ಅಭಿಮಾನಿಯೊಬ್ಬರು, ಈ ಫೆಬ್ರವರಿಯಲ್ಲಿ ನಾವು ಮೂರು ಪ್ರಸಿದ್ಧ ಗಾಯಕರನ್ನು ಕಳೆದುಕೊಂಡಿದ್ದೇವೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಭಾರತೀಯ ಸಂಗೀತ ಉದ್ಯಮದ ಎರಡು ಐಕಾನ್‍ಗಳು ಎಂದು ಟ್ವೀಟ್ ಗಳ ಸುರಿಮಳೆ ಕೇಳಿಬರುತ್ತಿದೆ. ಫೆಬ್ರವರಿ 6 ರಂದು ಲತಾ ಮಂಗೇಶ್ಕರ್ ಅವರ ಮರಣದ ನಂತರ, ಬಪ್ಪಿ ಲಹಿರಿ ಅವರು ತಮ್ಮ ಬಾಲ್ಯದ ಥ್ರೋಬ್ಯಾಕ್ ಪೋಸ್ಟ್ ಮಾಡಿದ್ದು, ಮಾ ಎಂದು ಬರೆದುಕೊಂಡಿದ್ದರು.
v
View this post on Instagram
ಲತಾ ಮಂಗೇಶ್ಕರ್ ಅವರು ಹಿಂದಿ, ಮರಾಠಿ, ಬಂಗಾಳಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ. ಲತಾ ಅವರಿಗೆ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳ ಜೊತೆಗೆ ಹಲವಾರು ರಾಷ್ಟ್ರೀಯ ಮತ್ತು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಲತಾ ಮಂಗೇಶ್ಕರ್ ಅವರ ‘ವೀರ್-ಜಾರಾ’ ಆಲ್ಬಂ ಸಾಂಗ್ ಆಗಿತ್ತು. ಈ ಸಾಂಗ್ ಅನ್ನು 2004ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್
ಬಪ್ಪಿ ಲಹರಿ ಅವರು 1970-80ರ ದಶಕದ ಚಲ್ತೆ ಚಲ್ತೆ, ಡಿಸ್ಕೋ ಡ್ಯಾನ್ಸರ್ ಮತ್ತು ಶರಾಬಿಯಂತಹ ಸಿನಿಮಾಗಳಿಗೆ ಹಿಟ್ ಸಾಂಗ್‍ಗಳನ್ನು ಸಂಯೋಜಿಸಿದ್ದು, ಜನಪ್ರಿಯರಾಗಿದ್ದರು. ಅವರು ಕೊನೆಯದಾಗಿ 2020ರಲ್ಲಿ ಬಿಡುಗಡೆಯಾದ ‘ಭಾಗಿ 3’ ಸಿನಿಮಾದಲ್ಲಿ ಸಾಂಗ್ ಹಾಡಿದ್ದಾರೆ. ಹಿರಿಯ ಗಾಯಕ ರಿಯಾಲಿಟಿ ಶೋ ಬಿಗ್‍ಬಾಸ್ 15ರ ಕೊನೆಯ ಸೀಸನ್‍ನಲ್ಲಿಯೂ ಸಹ ಕಾಣಿಸಿಕೊಂಡಿದ್ದರು.